ಕಾಶ್ಮೀರದಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ರ್ಯಾಲಿಯೊಂದರಲ್ಲಿ ಶಸ್ತ್ರಾಸ್ತ್ರ ಹಿಡಿದು ರಾಜಾರೋಷವಾಗಿ ಓಡಾಡಿದ್ದ ಉಗ್ರರು..!
ಶ್ರೀನಗರ, ಜ.13-ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಪಾಕ್ ಮೂಲದ ಉಗ್ರಗಾಮಿಗಳು ಸೆಪ್ಟೆಂಬರ್ನಲ್ಲಿ ಬೃಹತ್ ರ್ಯಾಲಿ ನಡೆಸಿದ್ದು, ರ್ಯಾಲಿ ಯಲ್ಲಿ ಉಗ್ರರು ರಾಜಾರೋಷವಾಗಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖಂಡ ಬುರ್ಹಾನ್ ವಾನಿಯನ್ನು ಭಾರತೀಯ ಯೋಧರು ಎನ್ಕೌಂಟರ್ನಲ್ಲಿ ಸದೆಬಡಿದಿದ್ದರು. ಬಳಿಕ ಕಾಶ್ಮೀರದಾದ್ಯಂತ ವಾನಿ ಬೆಂಬಲಿಗರು ಸೇನೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ 36 ನಾಗರಿಕರು, 1500ಕ್ಕೂ ಹೆಚ್ಚು ಜನಕ್ಕೆ ಗಾಯಗಳಾಗಿದ್ದವು.
ವಾನಿಯನ್ನು ಹತ್ಯೆ ಮಾಡಿದ ಸೈನಿಕರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಉಗ್ರರು ಹಪಹಪಿಸುತ್ತಿದ್ದರು. ರಾಜಧಾನಿ ಶ್ರೀನಗರದಲ್ಲಿ ಉಗ್ರರು ಸೆಪ್ಟೆಂಬರ್ನಲ್ಲಿ ರ್ಯಾಲಿ ನಡೆಸಿ ದೇಶ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಗಡಿಯಲ್ಲಿ ಯೋಧರು ಹದ್ದಿನಕಣ್ಣಿಟ್ಟಿದ್ದರೂ ಕಣ್ತಪ್ಪಿಸಿ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಉಗ್ರರು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಓಡಾಡುತ್ತಿರುವ ದೃಶ್ಯ ತಡವಾಗಿ ಬಹಿರಂಗಗೊಂಡಿದೆ. ಉರಿ ಪ್ರತೀಕಾರವಾಗಿ ಭಾರತ-ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸರ್ಜಿಕಲ್ ದಾಳಿ ನಡೆಸಿ ಸೇಡು ತೀರಿಸಿಕೊಂಡಿತ್ತು.
26 ರಂದು ನಡೆಯಲಿರುವ ಗಣರಾಜ್ಯೋತ್ಸವದಂದು ಉಗ್ರಗಾಮಿಗಳು ದೇಶದ ಪ್ರಮುಖ ಸ್ಥಳಗಳಲ್ಲಿ ಭಾರೀ ಸ್ಫೋಟ ನಡೆಸಲು ಸಜ್ಜಾಗಿದ್ದರೆ ಎಂಬ ಮಾಹಿತಿ ಕೂಡ ಇದೆ.
ಸರ್ಜಿಕಲ್ ಸ್ಟ್ರೈಕ್ ಹಾಗೂ ಹಿಜ್ಬುಲ್ಮುಜಾಹಿದ್ದೀನ್ವಾನಿ ಹತ್ಯೆ ಘಟನೆಗಳಿಗೆ ಸೇಡು ತೀರಿಸಿಕೊಳ್ಳಲು ಉಗ್ರರು ಕಾತುರರಾಗಿದ್ದಾರೆ. ಆದರೆ ಇವರ ಹೆಡೆಮುರಿ ಕಟ್ಟಲು ಭಾರತೀಯ ಯೋಧರು ಸನ್ನದ್ಧರಾಗಿದ್ದಾರೆ.