ಕಾಶ್ಮೀರದಲ್ಲಿ ಭಾರಿ ಹಿಮಪಾತದಿಂದ ಹುತಾತ್ಮರಾದ ಯೋಧರ ಸಂಖ್ಯೆ 14ಕ್ಕೆ ಏರಿಕೆ
ಜಮ್ಮು, ಜ.27- ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಹಿಮಕುಸಿತ ಘಟನೆಗಳಲ್ಲಿ ಮೃತಪಟ್ಟ ಯೋಧರ ಸಂಖ್ಯೆ 14ಕ್ಕೆ ಏರಿದೆ. ಗಡಿ ನಿಯಂತ್ರಣ ರೇಖೆ ಬಳಿಯ ಬಂಡಿಪೋರಂ ಜಿಲ್ಲೆಯ ಗುರೇಜ್ ವಲಯದಲ್ಲಿ ಬುಧವಾರ ರಾತ್ರಿ ಸೇನಾ ಶಿಬಿರದ ಮೇಲೆ ಭಾರೀ ಹಿಮಬಂಡೆ ಕುಸಿದು 10 ಮಂದಿ ಮೃತಪಟ್ಟಿದ್ದರು. ಇಂದು ಮುಂಜಾನೆ ನಾಲ್ವರು ಯೋಧರ ಮೃತದೇಹ ಪತ್ತೆಯಾಗುವುದರೊಂದಿಗೆ ಸಾವಿನ ಸಂಖ್ಯೆ 14ಕ್ಕೆ ಏರಿದೆ. ಗುರೇಜ್ ವಲಯದಲ್ಲಿ ಬುಧವಾರ ಸಂಜೆ ಮತ್ತೊಂದು ಹಿಮಕುಸಿತ ಸಂಭವಿಸಿತ್ತು.
ಗಸ್ತು ಕಾರ್ಯದ ಬಳಿಕ ಗಡಿ ಠಾಣೆಗೆ ಹಿಂದಿರುಗುತ್ತಿದ್ದ ಯೋಧರ ತಂಡ ಹಿಮದಡಿ ಸಿಲುಕಿದ್ದು, ರಕ್ಷಣಾ ಕಾರ್ಯಕರ್ತರು ಏಳು ಮೃತದೇಹಗಳನ್ನು ಹೊರತೆಗೆದಿದ್ದರು. ನಾಪತ್ತೆಯಾದವರ ಶೋಧ ಮುಂದುವರಿದಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments