ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರನ ಬಂಧನ
ಜಮ್ಮು, ನ.4- ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದರ ಬೇಟೆ ಕಾರ್ಯಾ ಚರಣೆಯನ್ನು ತೀವ್ರಗೊಳಿಸಿರುವ ಸೇನೆ ಮತ್ತು ಪೊಲೀಸರು ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರರನ್ನು ತಮ್ಮ ಬಲೆಗೆ ಕೊಡವಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸೋಪೋರಾದಲ್ಲಿ ನಿನ್ನೆ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿದ ಸೇನೆ ಮತ್ತು ಪೊಲೀಸರು ಎಲ್ಇಟಿ ಉಗ್ರನನ್ನು ಬಂಧಿಸಿದ್ದಾರೆ. ಆತನಿಂದ 1 ಎಕೆ-47 ರೈಫಲ್, ಗ್ರೆನೇಡ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿಚಾರಣೆಯಿಂದ ಸ್ಫೋಟಕ ಮಾಹಿತಿ ಬೆಳಕಿಗೆ ಬರುವ ಸಾಧ್ಯತೆ ಇದೆ. ಸರ್ಜಿಕಲ್ ಸ್ಟ್ರೈಕ್ ನಂತರ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಅಡಗುದಾಣಗಳ ಮೇಲೆ ದಾಳಿ ಮತ್ತು ಉಗ್ರರನ್ನು ಬಂಧಿಸುವ ಕಾರ್ಯಾಚರಣೆ ತೀವ್ರಗೊಂಡಿದೆ.
ಐಬಿಯಲ್ಲಿ ಮತ್ತೊಬ್ಬ ಸೆರೆ :
ಕಾಶ್ಮೀರದ ಕತುವಾ ಜಿಲ್ಲೆಯ ಹೀರಾನಗರ ವಲಯದ ಅಂತಾರಾಷ್ಟ್ರೀಯ ಗಡಿ ಬಳಿ ಶಂಕಾಸ್ಪದವಾಗಿ ಓಡಾಡುತ್ತಿದ್ದ ಪಾಕಿಸ್ತಾನದ ಉಗ್ರನೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ತಂಬಾಕು ಪೊಟ್ಟಣ ಮತ್ತಿತ್ತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಹತ್ವದ ಮಾಹಿತಿ ಸಂಗ್ರಹಿಸಲಾಗುತ್ತಿದೆ.