ಕಾಶ್ಮೀರದಲ್ಲಿ ‘ಲೀಡರ್’

Leader--01
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರ ಈಗಾಗಲೇ ಹಲವಾರು ರೀತಿಯಲ್ಲಿ ಕುತೂಹಲ ಹುಟ್ಟಿಸಿದೆ. ಈ ಚಿತ್ರ ತಂಡ ಇದೀಗ ಕಾಶ್ಮೀರದ ರಮಣೀಯ ಸ್ಥಳಗಳಲ್ಲಿ ಹದಿನಾರು ದಿನಗಳ ಕಾಲ ಹಾಡು, ಸಾಹಸ ಸನ್ನಿವೇಶ ಸೇರಿದಂತೆ ಮಾತಿನ ಭಾಗದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡು ವಾಪಾಸಾಗಿದೆ.  ಲೀಡರ್ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಆದರೆ ಕೆಲ ದೃಷ್ಯಗಳನ್ನು ಕಾಶ್ಮೀರದ ಸುತ್ತಲೇ ಚಿತ್ರೀಕರಣ ಮಾಡಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದ ಚಿತ್ರತಂಡ ಇದೀಗ ಅದನ್ನು ಸುಸೂತ್ರವಾಗಿ ಮುಗಿಸಿಕೊಂಡ ಖುಷಿಯಲ್ಲಿದೆ.

ಈ ಚಿತ್ರೀಕರಣಕ್ಕಾಗಿ ಶಿವರಾಜ್ ಕುಮಾರ್, ಬೇಬಿ ಪರಿಣಿತಾ, ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಪ್ರಣೀತ, ಆಶಿಕಾ ವಂಶಿಕೃಷ್ಣ, ಲಹರಿ ವೇಲು ಸೇರಿದಂತೆ ಮೂವತ್ತು ಮಂದಿ ಫೈಟರ್ಸ್‍ಗಳನ್ನೊಳಗೊಂಡ ನೂರಿಪ್ಪತ್ತು ಜನರನ್ನೊಳಗೊಂಡ ತಂಡ ಕಾಶ್ಮೀರಕ್ಕೆ ತೆರಳಿತ್ತು.  ಕಾಶ್ಮೀರದ ಸುತ್ತಲ ಪ್ರದೇಶಗಳಲ್ಲಿ ಸ್ಥಳೀಯರೂ ಸೇರಿ ಇನ್ನೂರರಿಂದ ಮುನ್ನೂರು ಜನರನ್ನೊಳಗೊಂಡು ಚಿತ್ರೀಕರಣ ನಡೆಸಲಾಗಿದೆ. ಶಿವರಾಜ್ ಕುಮಾರ್ ಅವರ ಅಭಿನಯದಲ್ಲಿ ವಿಜಯ್ ಮಾಸ್ಟರ್ ಸಾಹಸ ಸಂಯೋಜಿಸಿದ ಕೆಲ ಫೈಟ್ ಸೀನ್‍ಗಳನ್ನೂ ಇದೇ ಸಂದರ್ಭದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಸುರಿಯುತ್ತಿರುವ ಮಂಜಿನ ನಡುವೆ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಸಲಾಗಿದೆ. ಇನ್ನುಳಿದಂತೆ ಆಶಿಕಾ ಮತ್ತು ವಂಶಿ ಕೃಷ್ಣ ನಟನೆಯ ಒಂದು ಸುಂದರವಾದ ಹಾಡು ಮತ್ತು ಮಾತಿನ ಭಾಗವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಪ್ರದೀಪ್ ಅಂತೋನಿ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಅಂದ ಹಾಗೆ ಇನ್ನು ಲೀಡರ್ ಚಿತ್ರದ ಒಂದೆರಡು ಹಾಡಿನ ಭಾಗದ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ. ಅದಾದ ಬಳಿಕ ಶೀಘ್ರದಲ್ಲಿಯೇ ಚಿತ್ರಮಂದಿರಗಳಲ್ಲಿ ಲೀಡರ್ ಅಲೆ ಶುರುವಾಗಲಿದೆ.   ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಛನದಲ್ಲಿ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಸೇರಿ ನಿರ್ಮಿಸುತ್ತಿರುವ ಲೀಡರ್ ಚಿತ್ರವನ್ನು ನರಸಿಂಹ(ಸಹನಾ ಮೂರ್ತಿ) ನಿರ್ದೇಶಿಸುತ್ತಿದ್ದಾರೆ. ವೀರಸಮರ್ಥ್ ಸಂಗೀತ, ಗುರುಪ್ರಶಾಂತ್ ರೈ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ  ಈ ಚಿತ್ರಕ್ಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin