ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಪೊಲೀಸ್ ಗುಂಡಿಗೆ ಕುಖ್ಯಾತ ಭಯೋತ್ಪಾದಕ ಬಲಿ
ಶ್ರೀನಗರ,ಡಿ.2-ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿ ಪೊಲೀಸರಿಗೆ ಅಗತ್ಯವಾಗಿ ಬೇಕಿದ್ದ ಕುಖ್ಯಾತ ಭಯೋತ್ಪಾದಕನೊಬ್ಬನನ್ನು ಪೊಲೀಸರು ನಿನ್ನೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಗುಂಡಿಟ್ಟು ಕೊಂದಿದ್ದಾರೆ. ಸಾಧಿಕ್ ಮಲ್ಲಿಕ್ ಅಲಿಯಾಸ್ ಬಿಟ್ಟಾ ಮಲ್ಲಿಕ್ ಪೊಲೀಸ್ ಗುಂಡಿಗೆ ಹತನಾದ ಭಯೋತ್ಪಾದಕ. ಯೋಧರಿಗೆ ಗಾಯ: ಗಡಿಯಲ್ಲಿ ಮತ್ತೆ ಪಾಕಿಸ್ತಾನ ಸೈನಿಕರು ನಡೆಸಿದ ಪುಂಡಾಟಕ್ಕೆ ಕೆಲವು ಬಿಎಸ್ಎಫ್ ಯೋಧರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಕಾಶ್ಮೀರ ಕಣಿವೆಯ ಲಜೋರಿ ಜಿಲ್ಲೆಯ ಗಡಿ ನಿಯಂತ್ರಣರೇಖೆ ಬಳಿ ನಡೆದಿದೆ.
ಪಾಕಿಸ್ತಾನ ಯೋಧರು ನಿನ್ನೆ ರಾತ್ರಿಯಿಂದ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ಮುಂದುವರೆಸಿದ್ದಾರೆ. ಈ ದಾಳಿಯಲ್ಲಿ ಬಿಎಸ್ಎಫ್ ಯೋಧರಿಗೆ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download
Facebook Comments