ಕಾಶ್ಮೀರದ ನೈಸರ್ಗಿಕ ಗುಹೆಯೊಂದರಲ್ಲಿ ಉಗ್ರರ ಅಡಗುದಾಣ ಪತ್ತೆ ,ಭಾರೀ ಶಸ್ತ್ರಾಸ್ತ್ರ ವಶ

Spread the love

Cave

ಜಮ್ಮು, ಜ.24- ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಕಿಸ್ತ್ವಾರ್ ಜಿಲ್ಲೆಯ ನೈಸರ್ಗಿಕ ಗುಹೆಯೊಂದರಲ್ಲಿ ಉಗ್ರರ ಅಡಗುತಾಣವನ್ನು ಪತ್ತೆ ಮಾಡಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.   ಪೆÇಲೀಸರೊಂದಿಗೆ ಸೇನಾ ಪಡೆ ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಪರ್ವತ ಪ್ರದೇಶದ ಚಾತ್ರು ಎಂಬಲ್ಲಿ ನೈಸರ್ಗಿಕ ಗವಿಯೊಂದು ಪತ್ತೆಯಾಯಿತು. ಒಳಹೊಕ್ಕು ನೋಡಿದಾಗ ಅಲ್ಲಿ ಭಾರೀ ಶಸ್ತ್ರಾಸ್ತ್ರಗಳು ಇದ್ದ ಯುದ್ದ ಉಗ್ರಾಣ ಹೋಲುವ ಸಂಗ್ರಹ ಕಂಡುಬಂದಿತು.

ತಲಾ ಒಂದೊಂದು ಎಕೆ-47 ಬಂದೂಕು, ಪಿಸ್ತೂಲ್, ಗ್ರೆನೇಡ್ ಲಾಂಚರ್, ಏಳು ಗ್ರೆನೇಡ್‍ಗಳು, ಎರಡು ಚೀನಿ ಗ್ರೆನೇಡ್‍ಗಳು, ಮೂರು ಎಕೆ-47 ಬಂದೂಕ ಗುಂಡುಗಳ ಕವಚಗಳು, 428 ಸುತ್ತುಗಳು 7.62 ಎಂಎಂ ಎಕೆ-47 ಮತ್ತು ಎರಡು ಕೆನ್‍ವೂಡ್ ರೇಡಿಯೊ ಸೆಟ್‍ಗಳನ್ನು ಆ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದೆ.  ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಈ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ದಾಸ್ತಾನು ಮಾಡಲಾಗಿತ್ತು ಎಂದು ಉನ್ನತಾಧಿಕಾರಿಗಳು ಶಂಕಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin