ಕಿಟಕಿ ಮೂಲಕ ಮಲಗಿದ್ದವರ ವಿಡಿಯೋ ಮಾಡುತ್ತಿದ್ದ ಪೊಲೀಸಪ್ಪನಿಗೆ ಸ್ಥಳೀಯರಿಂದ ಗೂಸಾ

Spread the love

Camara-Video-Recording

ಮೈಸೂರು, ಮೇ 7- ಸೆಕೆಯೆಂದು ಕಿಟಕಿ -ಬಾಗಿಲು ತೆರೆದು ಮಲಗಿದ್ದ ಮನೆಗಳ ಬಳಿ ಹೋಗಿ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡುತ್ತಿದ್ದ ವಿಕೃತ ಮನಸ್ಸಿನ ಪೊಲೀಸ್ ಕಾನ್‍ಸ್ಟೆಬಲ್‍ನನ್ನು ಸ್ಥಳೀಯರೇ ಹಿಡಿದು ಥಳಿಸಿರುವ ಘಟನೆ ನಡೆದಿದೆ. ನಗರದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್‍ಸ್ಟೆಬಲ್ ಮೆಹಬೂಬಳ್ಳಿ ಥಳಿತಕ್ಕೊಳಗಾದವರು.

ಪೊಲೀಸರೆಂದರೆ ಗೌರವ ನೀಡುವ ಜನರಿಂದಲೇ ಈ ಕಾನ್‍ಸ್ಟೆಬಲ್ ಹಿಗ್ಗಾಮುಗ್ಗಾ ಥಳಿತಕ್ಕೊಳಗಾಗಿ ಪೊಲೀಸರ ಅತಿಥಿಯಾಗಿದ್ದಾರೆ. ರಾತ್ರಿ ಗಸ್ತಿನ ವೇಳೆ ಈತ ಮನೆಯ ಕಿಟಕಿಗಳ ಬಳಿ ಹೋಗಿ ಚಿತ್ರೀಕರಣ ಮಾಡುತ್ತಿದ್ದ ಎಂದು ಹೇಳಲಾಗಿದೆ. ಹಲವು ಬಾರಿ ಇದೇ ರೀತಿ ಕೃತ್ಯವೆಸಗಿರುವುದು ಕಂಡು ಬಂದಿದೆ. ಇಂದು ಬೆಳಗಿನ ಜಾವ 3 ಗಂಟೆಯ ಸುಮಾರಿನಲ್ಲಿ ಈತ ಮನೆಯಿಂದ ಬಳಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಸಾರ್ವಜನಿಕರು ಕಳ್ಳನೆಂದು ಭಾವಿಸಿ ಹಿಡಿದು ಥಳಿಸಿದಾಗ ಈತ ಪೊಲೀಸ್ ಕಾನ್‍ಸ್ಟೆಬಲ್ ಎಂಬುದು ಗೊತ್ತಾಗಿದೆ. ತದನಂತರ ಪೊಲೀಸ್ ವಶಕ್ಕೆ ಈತನನ್ನು ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin