ಕಿರುತೆರೆಯಿಂದ ಬೆಳ್ಳಿತೆರೆಯತ್ತ ಶಿವರಾಜ್ ಕೆ.ಆರ್.ಪೇಟೆ

Spread the love

FILM

ಗಾಂಧಿನಗರಕ್ಕೆ ಪ್ರವೇಶ ಪಡೆಯುವುದಕ್ಕೆ ಹಲವಾರು ದಾರಿಗಳನ್ನು ಹುಡುಕುತ್ತಾ ಅದೆಷ್ಟೋ ಮಂದಿ ಬಂದಿದ್ದಾರೆ. ಆದರೆ ಕೆಲವರಿಗೆ ಮಾತ್ರ ಅದೃಷ್ಟದ ಬಾಗಿಲು ತೆಗೆಯೋದು. ಅದು ನಿರೀಕ್ಷಿಸಿದಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಪರಿಶ್ರಮ ಇದ್ದರೆ ಮಾತ್ರ ನೆಲೆಯನ್ನು ಕಾಣುವುದಕ್ಕೆ ಸಾಧ್ಯ.  ಆ ರೀತಿ ಶ್ರಮ ಪಟ್ಟು ಬೆಳೆದಂತಹ ಯುವ ಪ್ರತಿಭೆ ಶಿವರಾಜ್ ಕೆ.ಆರ್.ಪೇಟೆ.ಕಿರುತೆರೆಯ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಪಡೆದ ಶಿವರಾಜ್ ಕೆ.ಆರ್.ಪೇಟೆ ಟಿವಿ ಶೋ ಮುಗಿದ ನಂತರ ಕಿರುತೆರೆಯಿಂದ ಬೆಳ್ಳಿತೆರೆಯತ್ತ ಮುಖ ಮಾಡಿದ್ದಾರೆ.

ಕಿರುತೆರೆಯಲ್ಲಿ ಶಿವರಾಜ್ ಪಡೆದ ಜನಪ್ರಿಯತೆಯನ್ನು ಬಳಸಿಕೊಳ್ಳಲು ನಾ ಮುಂದು.., ತಾ ಮುಂದು ಎಂದು ಮುಂದೆ ಬಂದಿರುವ ಹಲವು ನಿರ್ಮಾಪಕರು, ನಿರ್ದೇಶಕರು ಶಿವರಾಜ್‍ಗೆ ಭರ್ಜರಿ ಆಫರ್‍ಗಳನ್ನು ನೀಡುತ್ತಿದ್ದಾರಂತೆ. ಆದರೆ, ಚಿತ್ರರಂಗದಲ್ಲಿ ಬರುತ್ತಿರುವ ಎಲ್ಲಾ ಅವಕಾಶಗಳನ್ನು ಒಮ್ಮೆಲೆ ಒಪ್ಪಿಕೊಳ್ಳದೆ ಸಮಾಧಾನದಿಂದ ಹೆಜ್ಜೆಯಿಡಲು ನಿರ್ಧರಿಸಿ ದ್ದಾರೆ. ಸದ್ಯಕ್ಕೆ ಹಿರಿಯ ನಿರ್ದೇಶಕ ಎಸ್.ಉಮೇಶ್ ನಿರ್ದೇಶನ ಮಾಡುತ್ತಿರುವ ಮದ್ವೆ ದಿಬ್ಬಣ ಚಿತ್ರದಲ್ಲಿ ಅಭಿನಯಿಸುತ್ತಿರುವ ಶಿವರಾಜ್ ಕೆ.ಆರ್.ಪೇಟೆ, ಇತ್ತೀಚೆಗೆ ಚಿತ್ರದ ಸ್ಪೆಷಲ್ ನಂಬರ್ ಹಾಡಿಗೆ ಇತ್ತೀಚೆಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ .

ಅಭಿಷೇಕ್ ಮತ್ತು ಸೋನಾಲ್ ನಾಯಕ- ನಾಯಕಿಯಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ರವಿಕಿರಣ್, ಚಂದ್ರಕಲಾ ಮೋಹನ್ ಮೊದಲಾದ ಕಲಾವಿದರ ತಾರಾಗಣವಿದೆ.  ಬಿಎನ್‍ಆರ್ ಫಿಲಂಸ್ ಬ್ಯಾನರ್‍ನಡಿ ಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಬಿ.ಎನ್.ರವಿ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ಚಂದ್ರು ಬೆಳವಂಗಲ ಅವರ ಛಾಯಾಗ್ರಹಣವಿದೆ. ತಮ್ಮ ಚೊಚ್ಚಲ ಚಿತ್ರವಾದ `ಮದ್ವೆ ದಿಬ್ಬಣ’ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್, ಎ.ಟಿ.ರವೀಶ್ ಸಂಗೀತ ಸಂಯೋಜನೆ ಮಾಡಿರುವ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಸೆಟ್‍ನಲ್ಲಿ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರಂತೆ. ಅಂದಹಾಗೆ, ಚಿತ್ರತಂಡ ಇದೀಗ ಆ ಹಾಡಿನ ಮೇಕಿಂಗ್ ಸ್ಟಿಲ್ಸ್ ಬಿಡುಗಡೆ ಮಾಡಿದೆ.ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು, ಡ್ಯಾನ್ಸರ್ ಜೊತೆಯಲ್ಲಿ ಕುಣಿಯುತ್ತಿರುವ ಶಿವರಾಜ್ ಅವರ ಝಲಕ್ ಕಂಡು ಹಲವರು ಬೆರಗಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin