ಕಿವಿಸ್ ಬೌಲಿಂಗ್’ಗೆ ಕುಸಿದ ಭಾರತ, ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಸೋಲು

Spread the love

cricket

ನವದೆಹಲಿ  ಅ.20 ಕಿವಿಸ್ ಪಡೆಯ ಬೌಲಿಂಗ್ ದಾಳಿಗೆ ಕುಸಿದ ಭಾರತ 236 ರನ್ ಗಳಿಗೆ ಆಲೌಟ್ ಆಗುವ ಮೂಲಕ ನ್ಯೂಜಿಲೆಂಡ್ ವಿರುದ್ಧ 6 ರನ್ ಗಳ ರೋಚಕ ಸೋಲು ಕಂಡಿದೆ.  ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ಅಂತರದಲ್ಲಿ ನ್ಯೂಜಿಲೆಂಡ್ ಸಮಬಲ ಸಾಧಿಸಿದೆ.  ದೆಹಲಿ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 243 ರನ್ ಗಳ ಗುರಿಯನ್ನು ಬೆನ್ನತ್ತಿದ ಭಾರತ 49.3 ಓವರ್ ಗಳಲ್ಲಿ ಕೇವಲ 236ರನ್ ಗಳಿಗೆ ಆಲೌಟ್ ಆಯಿತು.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿತ್ತು. ನ್ಯೂಜಿಲೆಂಡ್ ಪರವಾಗಿ, ಕೇನ್ ವಿಲಿಯಮ್ಸನ್ ಅಮೋಘ ಪ್ರದರ್ಶನ ನೀಡಿ ಶತಕ ಗಳಿಸಿದ್ದಾರೆ. 1 ಸಿಕ್ಸರ್ ಹಾಗೂ 14 ಬೌಂಡರಿ ನೆರವಿನಿಂದ 118 ರನ್ ಗಳಿಸಿದರು. ರಾಸ್ ಟೇಲರ್ 21, ಕೊರಿ ಆಂಡರ್ಸನ್ 21 ಹಾಗೂ ಟಾಮ್ ಲೋಥಮ್ 46 ಉತ್ತಮ ಪ್ರದರ್ಶನ ನೀಡಿದರೂ, ಉಳಿದ ಬ್ಯಾಟ್ಸ್ ಮನ್ ಗಳು ಎರಡಂಕಿ ತಲುಪಲಿಲ್ಲ.

ಭಾರತದ ಪರವಾಗಿ ಜಸ್ ಪ್ರೀತ್ ಬೂಮ್ರಾ ಹಾಗೂ ಅಮಿತ್ ಮಿಶ್ರಾ ತಲಾ 3 ಹಾಗೂ ಉಮೇಶ್ ಯಾದವ್, ಅಕ್ಷರ್ ಪಟೇಲ್, ಕೇದಾರ್ ಜಾಧವ್ ತಲಾ 1 ವಿಕೆಟ್ ಗಳಿಸಿದರು.

ಭಾರತದ ಪರವಾಗಿ ರೋಹಿತ್ ಶರ್ಮ 15, ಅಜಿಂಕ್ಯಾ ರೆಹಾನೆ 28, ವಿರಾಟ್ ಕೊಹ್ಲಿ 9, ಮನೀಶ್ ಪಾಂಡೆ 19 ರನ್ ಗಳಿಸಿದರು. ಮಹೇಂದ್ರ ಸಿಂಗ್ ಧೋನಿ 39, ಕೇದಾರ್ ಜಾಧವ್ 41, ಅಕ್ಷರ್ ಪಟೇಲ್ 17, ಅಮಿತ್ ಮಿಶ್ರಾ 1, ಹಾರ್ದಿಕ್ ಪಾಂಡ್ಯ 36, ಉಮೇಶ್ ಯಾದವ್ ಅಜೇಯ 18 ರನ್ ಗಳಿಸಿದರು. ಅಂತಿಮವಾಗಿ ಭಾರತ 49.3 ಓವರ್ ಗಳಲ್ಲಿ 236 ರನ್ ಗಳಿಸಿ ಸೋಲು ಕಂಡಿದೆ.

► Follow us on –  Facebook / Twitter  / Google+

 

 

 

 

 

 

Sri Raghav

Admin