ಕಿವೀಸ್ ಕ್ಲೀನ್ ಸ್ವಿಪ್ : ಸರಣಿ ಜಯ ದಾಖಲಿಸಿದ ಟೀಮ್ ಇಂಡಿಯಾ

Teadm-Induia

ಇಂದೋರ್. ಅ.11:  ವಿರಾಟ್ ಕೊಹ್ಲಿ ನಾಯಕತ್ವದಲ್ಲಿ  ಟೀಮ್ ಇಂಡಿಯಾ ಮತ್ತೊಂದು ಅದ್ಭುತ ಜಯ ಸಾದಿಸಿದೆ. ನ್ಯೂಜಿಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ 321 ರನ್ಗಳ ಭರ್ಜರಿ ಜಯ ದಾಖಲಿಸಿದ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯನ್ನು ಕ್ಲಿನ್ ಸ್ವೀಪ್ ಮಾಡಿದೆ. ಭಾರತ – ನ್ಯೂಜಿಲೆಂಡ್ 3ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 2ನೇ ಇನ್ನಿಂಗ್ಸ್ 153 ರನ್ ಗಳಿಗೆ ಸರ್ವ ಪತನ ಕಾಣುವ ಮೂಲಕ ಭಾರತದ ವಿರುದ್ಧ ಮೂರು ಪಂದ್ಯಗಳನ್ನು ಸೋತಿದೆ.

ಭಾರತ ಮೊದಲ ಇನ್ನಿಂಗ್ಸ್ 557/5 ಡಿಕ್ಲೇೡ ಮಾಡಿಕೊಂಡಿತು, ಎರಡನೇ ಇನ್ನಿಂಗ್ಸ್ ನಲ್ಲಿ 216/3 ಗಳಿಸಿತು, ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 299/10 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 153 ಆಲೌಟ್ ಆಯಿತು.  ಈ ಮೂಲಕ ಭಾರತಕ್ಕೆ 321 ರನ್ಗಳ ಜಯ ಸಾಧಿಸಿತು. ಎರಡನೇ ಇನ್ನಿಂಗ್ಸ್ ನಲ್ಲಿ ಜಡೇಜಾ ಭರ್ಜರಿ 7 ವಿಕೆಟ್ ಪಡೆಯುವ ಮೂಲಕ ಜಯದ ರೂವಾರಿಯಾದರು, ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ಗೆ 13 ವಿಕೆಟ್ ಪಡೆದುಕೊಂಡರು. ಪಂದ್ಯ ಶ್ರೇಷ್ಠ ಮತ್ತು ಪಂದ್ಯ ಪುರುಷ ಪ್ರಶಸ್ತಿಗಳು ರವಿಚಂದ್ರನ್ ಅಶ್ವಿನ್ ಪಾಲಾಯಿತು.

ಭಾರತ ಮೊದಲ ಇನ್ನಿಂಗ್ಸ್ 557/5 ಡಿಕ್ಲೆರ್ ಮಾಡಿಕೊಂಡಿತು, ಎರಡನೇ ಇನ್ನಿಂಗ್ಸ್ ನಲ್ಲಿ 216/3 ಗಳಿಸಿತು, ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 299/10 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 153 ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ 321 ರನ್ಗಳ ಜಯ ಸಾಧಿಸಿತು.

► Follow us on –  Facebook / Twitter  / Google+

Sri Raghav

Admin