ಕೀನ್ಯಾ : ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡು 30 ಮಂದಿ ಸಜೀವ ದಹನ

Spread the love
Vehicles damaged in an oil tanker explosion
Vehicles damaged in an oil tanker explosion

ನೈರೋಬಿ, ಡಿ.11-ಪೆಟ್ರೋಲ್ ಟ್ಯಾಂಕರೊಂದು ಇತರ ವಾಹನಗಳಿಗೆ ಅಪ್ಪಳಿಸಿ ಸ್ಫೋಟಗೊಂಡ ಪರಿಣಾಮ 30ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡ ದುರಂತ ಕೀನ್ಯಾದ ನಲ್ವಾಶಾ ಪಟ್ಟಣದ ಹೊರವಲಯದಲ್ಲಿ ಸಂಭಸಿದೆ.  ನೈರೋಬಿ-ನಲ್ವಾಶಾ ಹೆದ್ದಾರಿಯಲ್ಲಿ ಸಂಭಸಿದ ಈ ಭೀಕರ ದುರಂತದಲ್ಲಿ 30ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ ಹಾಗೂ 11 ವಾಹನಗಳು ಭಸ್ಮವಾಗಿವೆ ಎಂದು ಕೀನ್ಯಾ ರಾಷ್ಟ್ರೀಯ ವಿಪತ್ತು  ನಿರ್ವಹಣೆ ಘಟಕದ ಪಿಯುಸ್ ಮಾಸೈ ಇಂದು ಹೇಳಿಕೆ ನೀಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಇಂಧನ ಟ್ಯಾಂಕರ್ ಇತರ ವಾಹನಗಳಿಗೆ ಡಿಕ್ಕಿ ಹೊಡೆದು ಸ್ಫೋಟಗೊಂಡಿತು. ಈ ದುರ್ಘಟನೆಯಲ್ಲಿ 11 ವಾಹನಗಳು ಸುಟ್ಟು ಕರಕಲಾಗಿವೆ ಎಂದು ಕೀನ್ಯಾದ ರೆಡ್‍ಕ್ರಾಸ್ ತಿಳಿಸಿದೆ.

ಭಾರೀ ಶಬ್ಧದೊಂದಿಗೆ ಇಂಧನ ಟ್ಯಾಂಕರ್ ಸ್ಫೋಟಗೊಂಡಿತು. ವಾಹನಗಳು ಬೆಂಕಿ ಚೆಂಡುಗಳಂತೆ ಚೆಲ್ಲಾಪಿಲ್ಲಿಯಾದವು. ಕೆಲವೇ ಕ್ಷಣಗಳಲ್ಲಿ ವಾಹನಗಳಲ್ಲಿದ್ದ 30ಕ್ಕೂ ಹೆಚ್ಚು ಮಂದಿ ಜೀವಂತ ದಹನಗೊಂಡು ಅನೇಕರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin