ಕುಡಿದ ಅಮಲಿನಲ್ಲಿ ನಗರಸಭಾ ಸದಸ್ಯರಿಬ್ಬರು ಪರಸ್ಪರ ಮಾರಾಮಾರಿ ಹೊಡೆದಾಡಿರುವ ಘಟನೆ
ಚಿಕ್ಕಮಗಳೂರು,ಡಿ.12-ಕುಡಿದ ಅಮಲಿನಲ್ಲಿ ನಗರಸಭಾ ಸದಸ್ಯರಿಬ್ಬರು ಪರಸ್ಪರ ಮಾರಾಮಾರಿ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ನಗರಸಭೆ ಸದಸ್ಯ ಬಿಜೆಪಿಯ ಅಪ್ಸರ್ ಅಹಮ್ಮದ್ ಮತ್ತು ನಗರಸಭಾ ಮಾಜಿ ಸದಸ್ಯ ಹಾಗೂ ಜಿಲ್ಲಾ ಹಿಂದುಳಿದ ಘಟಕದ ಕಾಂಗ್ರೆಸ್ ಅಧ್ಯಕ್ಷರಾಗಿರುವ ಕೆ.ಎಂ.ನಾಗರಾಜ್ ಅವರು ಮದ್ಯ ಸೇವಿಸಲೆಂದು ನಿನ್ನೆ ರಾತ್ರಿ ಸಿಟಿ ಕ್ಲಬ್ಗೆ ಬಂದಿದ್ದರು. ಈ ವೇಳೆ ಹಣದ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ನಾಗರಾಜ್ ಮದ್ಯದ ಬಾಟಲಿನಿಂದ ಅಪ್ಸರ್ ತಲೆಗೆ ಹೊಡೆದಿದ್ದಾನೆ. ಗಾಯಗೊಂಡ ಅಪ್ಸರ್ನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ನಗರಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download
Facebook Comments