ಕುಡಿದ ಮತ್ತಿನಲ್ಲಿ ಚೂರಿಯಿಂದ ಇರಿದು ಸೋದರ ಸಂಬಂಧಿ ಕೊಲೆ
ಬಂಟ್ವಾಳ, ಮೇ 16-ಚೂರಿಯಿಂದ ಇರಿದು ಸೋದರ ಸಂಬಂಧಿಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ನೀರಪಾದೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ರಂಜಿತ್ (26) ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಯುವಕ.ಈತನ ಚಿಕ್ಕಪ್ಪನ ಮಗ ನವೀನ್ ಕುಡಿದ ಮತ್ತಿನಲ್ಲಿ ಕೊಲೆ ಗೈದು ಪರಾರಿಯಾಗಿದ್ದಾನೆ.ಕೊಲೆಯಾದ ರಂಜಿತ್ ವರ್ಷದ ಹಿಂದಷ್ಟೆ ಮದುವೆಯಾಗಿದ್ದು, ಎರಡು ತಿಂಗಳ ಮಗುವಿದೆ. ಆರೋಪಿ ಕೃತ್ಯವೆಸಗುವ ವೇಳೆ ರಂಜಿತ್ ತಂದೆ ಆತನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದರಾದರೂ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.ಭಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >