ಕುಡಿಯದಿದ್ದರೂ ಡ್ರಿಂಕ್ ಅಂಡ್ ಡ್ರೈವ್ ಕೇಸ್ ಹಾಕಿದ್ದ ಇಬ್ಬರು ಪೊಲೀಸರ ಅಮಾನತು

Police

ಮೈಸೂರು, ಅ.27- ಕೆಆರ್ ಸಂಚಾರಿ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ಡಿಸಿಪಿ ರುದ್ರಮುನಿ ಆದೇಶ ಹೊರಡಿಸಿದ್ದಾರೆ.  ಹೆಡ್‍ಕಾನ್‍ಸ್ಟೇಬಲ್ ಕುಮಾರಸ್ವಾಮಿ, ಕಾನ್‍ಸ್ಟೇಬಲ್ ಸೋಮ ಅಮಾನತುಗೊಂಡವರು.ಇತ್ತೀಚೆಗೆ ಗುಂಡ್ಲುಪೇಟೆಯಿಂದ ಹುಣಸೂರಿಗೆ ಟೊಮ್ಯಾಟೋ ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಕರ್ತವ್ಯದಲ್ಲಿದ್ದ ಈ ಇಬ್ಬರು ಪೊಲೀಸರು ತಡೆದು ನಿಲ್ಲಿಸಿ ಚಾಲಕನಿಗೆ ನೀನು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದೀಯಾ ಎಂದು ಠಾಣೆಗೆ ಕರೆದೊಯ್ದು ವಾಹನವನ್ನು ವಶಪಡಿಸಿಕೊಂಡಿದ್ದರು.
ತನಿಖೆ ವೇಳೆ ಚಾಲಕ ಮದ್ಯಪಾನ ಮಾಡಿಲ್ಲದಿರುವುದು ಗೊತ್ತಾಗಿದೆ.

ಈ ವೇಳೆ ವಾಹನ ಬಿಡಲು ಚಾಲಕನ ಬಳಿ ಹಣ ಕೇಳಿದ್ದರು ಎಂಬ ಆರೋಪ ಈ ಇಬ್ಬರು ಪೊಲೀಸರ ಮೇಲಿತ್ತು. ಪೊಲೀಸರ ವರ್ತನೆಯಿಂದ ಬೇಸತ್ತ ಚಾಲಕ ಠಾಣೆ ಮುಂದೆಯೇ ಮರಕ್ಕೆ ನೇಣು ಹಾಕಿಕೊಳ್ಳಲು ಮುಂದಾದಾಗ ಹೆದರಿ ಈತನ ವಾಹನದ ಜತೆಗೆ ಚಾಲಕನನ್ನು ಬಿಟ್ಟು ಕಳುಹಿಸಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ ಈ ಇಬ್ಬರು ಕರ್ತವ್ಯ ಲೋಪ ಎಸಗಿರುವುದು ಸಾಬೀತಾದ್ದರಿಂದ ಇವರನ್ನು ಅಮಾನತುಗೊಳಿಸಲಾಗಿದೆ.

► Follow us on –  Facebook / Twitter  / Google+

Sri Raghav

Admin