ಕುತೂಹಲ ಕೆರಳಿಸಿದ ಏಕದಿನ ಸರಣಿ : ಮತ್ತೆ ಜಯದ ಓಟಕ್ಕೆ ಮರಳುವುದೇ ಭಾರತ..?

ODI-Cricket

ಮೊಹಾಲಿ, ಅ.22– ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದ್ದು ಈಗ ನಾಳೆ ಇಲ್ಲಿ ನಡೆಯಲಿರುವ ಮೂರನೆ ಪಂದ್ಯವು ಭಾರಿ ಕುತೂಹಲ ಮೂಡಿಸಿದೆ. ಧರ್ಮಶಾಲಾದಲ್ಲಿ ಭರ್ಜರಿ ಜಯ ಸಾಧಿಸಿದ್ದ ಧೋನಿ ಬಳಗ ನವದೆಹಲಿಯಲ್ಲಿ ಸೋಲು ಕಂಡಿದ್ದರು ಕೂಡ ಮೊಹಾಲಿಯಲ್ಲಿ ಮತ್ತೆ ಜಯದ ಓಟಕ್ಕೆ ಮರಳಲು ಕಾತರದಿಂದಿದೆ.

ಆರಂಭಿಕ ವೈಫಲ್ಯ:

ಶಿಖರ್ ಧವನ್‍ರ ಅನುಪಸ್ಥಿತಿಯಿಂದ ಆರಂಭಿಕ ಆಟಗಾರನಾಗಿ ಇಳಿದಿರುವ ಅಜೆಂಕ್ಯಾ ರಹಾನೆ ಹಾಗೂ ರೋಹಿತ್ ಶರ್ಮಾ ಎರಡು ಪಂದ್ಯಗಳಲ್ಲಿ ಬೃಹತ್ ಜೊತೆಯಾಟ ನೀಡದಿರುವುದು ಧೋನಿಗೆ ತಲೆನೋವಾಗಿದ್ದು ಈಗ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ತರಲು ಚಿಂತಿಸಿದ್ದಾರೆ.

ರೈನಾ ಇನ್:

ವೈರಲ್ ಜ್ವರದಿಂದ ಬಳಲುತ್ತಿರುವ ಮಧ್ಯಮ ಕ್ರಮಾಂಕದ ಆಟಗಾರ ಸುರೇಶ್‍ರೈನಾ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ನಾಳೆಯ ಪಂದ್ಯದಲ್ಲಿ ಅಖಾಡಕ್ಕಿಳಿದರೆ ಮನೀಷ್ ಪಾಂಡೆ ಹಾಗೂ ಕೇದಾರ್ ಜಾಧವ್‍ರ ಪೈಕಿ ಯಾರನ್ನು ಕೈಬಿಡಬೇಕೆಂದು ಧೋನಿ ಚಿಂತಿಸುತ್ತಿದ್ದಾರೆ.

ಟೇಲರ್‍ಗೆ ಕೊಕ್:

ಕೇನ್ ವಿಲಿಯಮ್ಸ್‍ರ ಭರ್ಜರಿ ಶತಕದ ನೆರವಿನಿಂದ ಎರಡನೇ ಏಕದಿನ ಪಂದ್ಯವನ್ನು ಜಯಿಸಿದ ನ್ಯೂಜಿಲೆಂಡ್ ಈಗ ಮೂರನೇ ಪಂದ್ಯವನ್ನು ಗೆಲ್ಲುವ ತವಕದಲ್ಲಿದ್ದು ಟೆಸ್ಟ್ ಹಾಗೂ ಮೊದಲ 2 ಏಕದಿನ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರಾಸ್ ಟೇಲರ್‍ಗೆ ನಾಳೆ ಪಂದ್ಯದಿಂದ ಕೊಕ್ ನೀಡಲು ವಿಲಿಯಮ್ಸ್ ನಿರ್ಧರಿಸಿದ್ದಾರೆ. ಗೆಲುವು ಸೋಲಿನ ಏರಿಳಿತ ಕಂಡಿರುವ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೂರನೆ ಪಂದ್ಯವು ಭಾರಿ ಕುತೂಹಲ ಮೂಡಿಸಿದ್ದು ಇನ್ನಿಂಗ್ಸ್ ಮುನ್ನಡೆ ದೊರೆಕಿಸಿಕೊಳ್ಳಲು ಎರಡು ತಂಡಗಳಿರುವುದರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಸ್ತ್ ವೀಕೆಂಡ್ ಎಂಡ್ ಆಗುವ ಲಕ್ಷಣಗಳು ಗೋಚರಿಸಿವೆ.

► Follow us on –  Facebook / Twitter  / Google+

Sri Raghav

Admin