ಕುತೂಹಲ ಘಟ್ಟ ತಲುಪಿದ ದ್ವಿತೀಯ ಟೆಸ್ಟ್ ..!

test

ವಿಶಾಖಪಟ್ಟಣಂ,ನ.20- ಪ್ರವಾಸಿ ಇಂಗ್ಲೆಂಡ್ ಮತ್ತು ಭಾರತದ ನಡುವೆ ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದೆ. ಭಾರತ ತನ್ನ ದ್ವಿತೀಯ ಇನ್ನಿಂಗ್ಸ್‍ನ 204 ರನ್‍ಗಳಿಗೆ ಅಂತ್ಯಗೊಳಿಸಿದ್ದು, ಇಂಗ್ಲೆಂಡ್ ಗೆಲ್ಲಲು 405 ರನ್‍ಗಳ ಕಠಿಣ ಸವಾಲಿನ ಗುರಿ ನೀಡಿದೆ. ಇಲ್ಲಿನ ವೈ.ಎಸ್.ಆರ್. ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯವು ರೋಚಕ ಘಟದತ್ತ ತಲುಪಿದೆ. 3 ವಿಕೆಟ್ ನಷ್ಟಕ್ಕೆ 98 ರನ್‍ಗಳಿಂದ ಪಂದ್ಯದ 4ನೇ ದಿನದಾಟ ಆರಂಭಿಸಿದ ಭಾರತ, ಮೊದಲ ಅವಯಲ್ಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 2ನೇ ಇನ್ನಿಂಗ್ಸ್‍ನಲ್ಲಿ 63.1 ಓವರ್‍ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 204 ರನ್ ಕಲೆ ಹಾಕಿತು. ಮೊದಲ ಇನ್ನಿಂಗ್ಸ್‍ನಲ್ಲಿ 200 ರನ್‍ಗಳ ಬೃಹತ್ ಮುನ್ನಡೆ ಸಾಸುವ ಮೂಲಕ ಭಾರತ ಆಂಗ್ಲರಿಗೆ 405 ರನ್‍ಗಳ ಸವಾಲು ನೀಡಿದೆ.  ನಿನ್ನೆ 56 ರನ್ ಬಾರಿಸಿ ಅರ್ಧಶತಕ ದಾಖಲಿಸಿದ ನಾಯಕ ವಿರಾಟ್ ಕೊಹ್ಲಿ ಈ ಮೊತ್ತಕ್ಕೆ 25 ರನ್ ಸೇರಿಸಿ ರಸೀದ್ ಬೌಲಿಂಗ್‍ನಲ್ಲಿ ಔಟಾದರು. ಇವರ ಜೊತೆಯಲ್ಲಿ ಅಜೇಯರಾಗಿ ಉಳಿದಿದ್ದ ಅಜಿಂಕ್ಯಾ ರಹಾನೆ ಇಂದು ಕೇವಲ 4 ರನ್ ಸೇರಿಸಿ ಒಟ್ಟು 26ರನ್ ಗಳಿಸಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‍ನಲ್ಲಿ ಕುಕ್‍ಗೆ ಕ್ಯಾಚ್ ಇತ್ತು ನಿರ್ಗಮಿಸಿದರು.

ಬಳಿಕ ರವೀಂದ್ರ ಜಡೇಜ 14, ಸಹಾ 2, ಉಮೇಶ್ ಯಾದವ್ ಶೂನ್ಯ ಸಂಪಾದಿಸಿ ವಿಕೆಟ್ ಒಪ್ಪಿಸಿದರು. 162 ರನ್‍ಗೆ 9 ವಿಕೆಟ್ ಕಳೆದುಕೊಂಡು ಬೇಗನೆ ಆಲ್‍ಔಟ್ ಆಗುವ ಭೀತಿಯಲ್ಲಿದ್ದಾಗ ತಂಡಕ್ಕೆ ಜಯಂತ್ ಯಾದವ್ ಹಾಗೂ ಮಹಮ್ಮದ್ ಶಮಿ ಆಸರೆಯಾದರು. 10ನೇ ವಿಕೆಟ್ ಜೊತೆಯಾಟದಲ್ಲಿ 42 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಶಮಿ 19 ರನ್ ಗಳಿಸಿ ಅಲಿ ಬೌಲಿಂಗ್‍ಗೆ ಔಟಾದರು. ಜಯಂತ್ ಯಾದವ್ 27 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಭಾರತ 204 ರನ್‍ಗಳಿಗೆ ಸರ್ವಪತನವಾಗಿ 405 ರನ್‍ಗಳ ಟಾರ್ಗೆಟ್‍ನ್ನು ಪ್ರವಾಸಿ ತಂಡಕ್ಕೆ ನೀಡಿತು.  405 ರನ್‍ಗಳ ಸವಾಲು ಎದುರಿಸುತ್ತಿರುವ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿ ವಿಕೆಟ್ ನಷ್ಟವಿಲ್ಲದೆ 17 ರನ್ ದಾಖಲಿಸಿದೆ. ಆರಂಭಿಕ ಆಟಗಾರ ಅಲಸ್ಟರ್ ಕುಕ್ ಮತ್ತು ಅಮಿತ್ ತಲಾ 9 ರನ್‍ಗಳಿಸಿ ಆಟವಾಡುತ್ತಿದ್ದಾರೆ.

► Follow us on –  Facebook / Twitter  / Google+

Sri Raghav

Admin