ಕೃಷ್ಣಗಿರಿಯಲ್ಲಿ ಸರಣಿ ಅಪಘಾತ , ಬೆಂಗಳೂರಿನ ಐವರ ದುರ್ಮರಣ

Accident
ಕೃಷ್ಣಗಿರಿ, ಮಾರ್ಚ್ 13: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಬೆಂಗಳೂರು ಮೂಲದ ಐವರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ತಮಿಳುನಾಡಿಗೆ ಇಕೋ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ 7 ಜನರಲ್ಲಿ 5 ಜನ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಾರುತಿ ಇಕೋ ಹಾಗೂ ಕೆ.ಎಸ್.ಆರ್.ಟಿ.ಸಿ, ಲಾರಿ ನಡುವೆ ಸರಣಿ ಅಪಘಾತ ನಡೆದಿದೆ. ಘಟನ ಸ್ಥಳಕ್ಕೆ ಆಗಮಿಸಿದ ಸೂಳಗಿರಿ ಪೋಲಿಸರು ಮೃತರ ಶವಗಳನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ , ಗಾಯಗೊಂಡಿರುವವರನ್ನು ಳೀಯ ಆಸ್ಪತ್ರೆಗೆ
ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Sri Raghav

Admin