ಕೆಂಪು ದೀಪ ನಿರ್ಬಂಧ : ಇಂದಿನಿಂದಲೇ ಆದೇಶ ಪಾಲಿಸಿದ ಸಿಎಂಗಳು

Spread the love

Re-Ligh-Car-01

ನವದೆಹಲಿ/ಚೆನ್ನೈ, ಏ.20- ಅತಿಗಣ್ಯ ವ್ಯಕ್ತಿಗಳ ವಾಹನಗಳಿಗೆ ಕೆಂಪು ದೀಪದ ಬಳಕೆಗೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ ರಾಜಧಾನಿ ದೆಹಲಿ ಮತ್ತು ಇತರ ರಾಜ್ಯಗಳ ಮಂತ್ರಿಮಹೋದಯರು ಮತ್ತು ವಿವಿಐಪಿಗಳು ಇಂದಿನಿಂದಲೇ ತಮ್ಮ ಕಾರಿನ ಮೇಲಿದ್ದ ಕೆಂಪುಗೂಟಗಳನ್ನು ತೆಗೆದು ಹಾಕಿದ್ದಾರೆ.  ಈ ನಿಯಮ ಮೇ 1ರಿಂದ ಜಾರಿಗೆ ಬರಲಿದ್ದರೂ ಕೇಂದ್ರ ಸಚಿವರು ಮತ್ತು ಕೆಲವು ರಾಜ್ಯಗಳ ಮಂತ್ರಿ ಮಹೋದಯರು ತಮ್ಮ ವಾಹನ ಮೇಲಿದ್ದ ಕೆಂಪು ದೀಪಗಳ ಬಳಕೆಯನ್ನು ಬಂದ್ ಮಾಡಿದ್ದಾರೆ.ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿಯಲ್ಲಿಂದು ಜಾರಿನಿರ್ದೇಶನಾಲಯದ ಮುಂದೆ ಆಗಮಿಸಿದ್ದ ಹಿಮಾಚಲಪ್ರದೇಶ ಮುಖ್ಯಮಂತ್ರಿ ವೀರಭದ್ರಸಿಂಗ್ ತಮ್ಮ  ಕಾರಿನ ಮೇಲಿದ್ದ ಕೆಂಪು ದೀಪವನ್ನು ಬಟ್ಟೆಯಿಂದ ಮುಚ್ಚಿದ್ದರು.ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರೂ ಸಹ ತಮ್ಮ ವಾಹನದ ಮೇಲಿದ್ದ ಕೆಂಪು ಗೂಟವನ್ನು ಮರೆ ಮಾಚಿದ್ದರು.

 ಕಾರಿನ ಕೆಂಪು ದೀಪ ತೆರವುಗೊಳಿಸಿದ ಗೃಹ ಸಚಿವರು : 

ಬೆಂಗಳೂರು, ಏ.20-ತುರ್ತು ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳಿಗೆ ಕೆಂಪುದೀಪ ಬಳಸುವಂತಿಲ್ಲ ಎಂದು ಕೇಂದ್ರ ಸರ್ಕಾರ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಕಾರಿಗೆ ಅಳವಡಿಸಿದ ಕೆಂಪುದೀಪವನ್ನು ತೆರವುಗೊಳಿಸಿದ್ದಾರೆ.ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದಂತೆ ಪರಮೇಶ್ವರ್ ಅವರು ತಮ್ಮ ಅಧಿಕಾರಿಗಳಿಗೆ ಹೇಳಿ ಕೆಂಪು ದೀಪವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು.

ನಿನ್ನೆ ಕೇಂದ್ರ ಸರ್ಕಾರವು ತುರ್ತು ವಾಹನಗಳಿಗೆ ಹೊರತುಪಡಿಸಿ ಬೇರೆ ಯಾವ ವಾಹನಗಳಿಗೂ ಕೆಂಪು ದೀಪ ಅಳವಡಿಸಬಾರದೆಂದು ಸುತ್ತೋಲೆ ಹೊರಡಿಸಿತ್ತು. ಹೀಗಾಗಿ ಸಚಿವರು ಮತ್ತು ಇತರೆ ಗಣ್ಯರು ತಮ್ಮ ಕಾರುಗಳಿಗೆ ಕೆಂಪುದೀಪ ಬಳಸುವಂತಿಲ್ಲ. ಈ ನಿಯಮವು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಆದರೆ ಆಯಾ ರಾಜ್ಯಗಳು ಈ ಹೊಸ ನಿಯಮವನ್ನು ಯಾವ ರೀತಿ ಸ್ವೀಕರಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin