ಕೆಆರ್’ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲೆತ್ನಿಸಿದವರ ಮೇಲೆ ಲಾಠಿಚಾರ್ಜ್

0b409af0-bc15-4f56-89f3-cba6fc71a441
ಕೆಆರ್ಎಸ್, ಸೆ.9- ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ರೈತರು ಕೆಆರ್ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿ ನಂತರ ಅಶ್ರುವಾಯು ಪ್ರಯೋಗಿಸಿದರು. ಇಂದು ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್ಎಸ್ ಅಣೆಕಟ್ಟೆಗೆ ರೈತ ಸಂಘಟನೆಯ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಇಂದು ಮಧ್ಯಾಹ್ನ ಮುತ್ತಿಗೆ ಹಾಕಲು ಮುಂದಾದಾಗ ರೈತರಿಗೆ ಲಾಠಿ ಏಟಿನ ರುಚಿ ತೋರಿಸಿದರು.  ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಲೆಕ್ಕಿಸದೆ ಮುರಿದು ಹಾಕಿ ಅಣೆಕಟ್ಟು ಒಳಪ್ರವೇಶಿಸಲು ಉದ್ರಿಕ್ತರು ಪ್ರಯತ್ನಿಸಿದರು. ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಪರಿಪರಿಯಾಗಿ ಮನವಿ ಮಾಡಿಕೊಂಡರೂ ಲೆಕ್ಕಿಸಲಿಲ್ಲ.  ಸಾವಿರಾರು ಸಂಖ್ಯೆಯ ರೈತರು ಅಣೆಕಟ್ಟೆಗೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿ ನಂತರ ಅಶ್ರುವಾಯು ಸಿಡಿಸಿದರು.

6eace4ca-e9f8-479e-8301-ae9a7bb80364

ಒಂದು ಹಂತದಲ್ಲಿ ರೈತರು ಇನ್ನೇನು ಅಣೆಕಟ್ಟು ಒಳ ಪ್ರವೇಶಿಸಿದರು ಎನ್ನುವಷ್ಟರಲ್ಲಿ ಪೊಲೀಸರು ಸಿಕ್ಕ ಸಿಕ್ಕವರನ್ನು ಅಟ್ಟಾಡಿಸಿ ಲಾಠಿಯಿಂದ ಚಚ್ಚಿ ಹಾಕಿದರು. ಪೊಲೀಸರ ಹೊಡೆತದಿಂದ ತಪ್ಪಿಸಿಕೊಳ್ಳಲು ಪ್ರತಿಭಟನಾನಿರತರು ಹೊಲ-ಗದ್ದೆಗಳಿಗೆ ಓಡಿ ಹೋದರೂ ಬಿಡದ ಪೊಲೀಸರು ಮಕ್ಕಳು, ಮಹಿಳೆಯರು, ವೃದ್ಧರು ಯಾವುದನ್ನೂ ಲೆಕ್ಕಿಸದೆ ಲಾಠಿಪ್ರಹಾರ ನಡೆಸಿದರು.
ಒಂದು ಹಂತದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಕೆಲವರು ಸರ್ಕಾರ ಮತ್ತು ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇನ್ನೇನು ಪರಿಸ್ಥಿತಿ ಕೈ ಮೀರಲಿದೆ ಎಂಬುದನ್ನು ಅರಿತ ಪೊಲೀಸರು ಟಿಯರ್ ಗ್ಯಾಸ್ ಸಿಡಿಸಿ ಗುಂಪು ಚದುರಿಸಿದರು.

xx

ಸದ್ಯಕ್ಕೆ ಕೆಆರ್ಎಸ್ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯಾವುದೇ ವೇಳೆ ರೈತರು ಮತ್ತೆ ಸಿಡಿದೇಳುವ ಸಾಧ್ಯತೆ ನಿಚ್ಚಳವಾಗಿದೆ.  ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಸುದ್ದಿ ವಾಹಿನಿಗಳಲ್ಲಿ ಹಬ್ಬುತ್ತಿದ್ದಂತೆ ಮಂಡ್ಯದಲ್ಲಿ ಮತ್ತೆ ಪ್ರತಿಭಟನೆ ಕಾವೇರತೊಡಗಿದೆ. ಪೊಲೀಸರ ಈ ಕ್ರಮ ಖಂಡಿಸಿ ಪ್ರತಿಭಟನಾನಿರತರು ಧಿಕ್ಕಾರದ ಘೋಷಣೆ ಕೂಗಿ ರಸ್ತೆಗಳಲ್ಲಿ ಟಯರ್ ಸುಟ್ಟು ರಸ್ತೆ ತಡೆ ನಡೆಸಿದ್ದಾರೆ.  ಶಾಂತ ರೀತಿಯಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ದರ್ಪ ಮೆರೆದಿದ್ದಾರೆ. ಅನ್ನದಾತನ ಮೇಲೆ ಲಾಠಿ ಪ್ರಹಾರ ನಡೆಸಿದರೆ ಮುಂದೆ ನಡೆಯಲಿರುವ ಎಲ್ಲ ಅನಾಹುತಕ್ಕೂ ಪೊಲೀಸರೇ ಕಾರಣರಾಗುತ್ತಾರೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ss

ಹೆಚ್ಚಿನ ಭದ್ರತೆ:

ಕೆಆರ್ಎಸ್ಗೆ ರೈತರು ಮುತ್ತಿಗೆ ಹಾಕಲು ಯತ್ನಿಸಿರುವುದರಿಂದ ಅಣೆಕಟ್ಟು ಸುತ್ತಮುತ್ತ ಇನ್ನೂ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ.
ಸದ್ಯಕ್ಕೆ ಕೆಎಸ್ಆರ್ಪಿ, ಆರ್ಎಎಫ್ ಪಡೆಗಳನ್ನು ನಿಯೋಜಿಸಲಾಗಿದ್ದು, ಸಾಧ್ಯವಾದರೆ ಇನ್ನಷ್ಟು ಅರೆಸೇನಾ ಪಡೆಗಳನ್ನು ಅಣೆಕಟ್ಟು ಸುತ್ತಮುತ್ತ ನಿಯೋಜಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆಂದು ತಿಳಿದುಬಂದಿದೆ. ಇದೇ ರೀತಿ ಕಾವೇರಿ ಜಲಾನಯನ ತೀರ ಪ್ರದೇಶದ ಅಣೆಕಟ್ಟುಗಳಾದ ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳಿಗೆ ಹೆಚ್ಚಿನ ಭದ್ರತೆ ಜತೆಗೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲೂ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಹೆಚ್ಚಿಸಲು ಸೂಚನೆ ಕೊಡಲಾಗಿದೆ.

d928571a-acb1-42d7-b00e-b59da5c7e928

ಮೂಲಗಳ ಪ್ರಕಾರ, ಮಂಡ್ಯ ಜಿಲ್ಲೆಯಲ್ಲಿ ನಾಳೆಯಿಂದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ರೈತರು ತೀರ್ಮಾನಿಸಿದ್ದಾರೆ. ಜತೆಗೆ ಪೊಲೀಸರ ಕ್ರಮದ ವಿರುದ್ಧವೂ ಹೋರಾಟಕ್ಕಿಳಿಯಲು ಮುಂದಾಗಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡುವಂತೆ ಸರ್ಕಾರ ಸೂಚನೆ ನೀಡಿದೆ.  ಈ ಹಿಂದೆ ಮಹದಾಯಿ ಯೋಜನೆ ವೇಳೆ ರೈತರು ಪ್ರತಿಭಟನೆ ನಡೆಸಿದಾಗಲೂ ಪೊಲೀಸರು ಇದೇ ರೀತಿ ಲಾಠಿ ಚಾರ್ಜ್ ನಡೆಸಿದ್ದರು. ಕೊನೆಗೆ ಕೆಲ ಅಧಿಕಾರಿಗಳನ್ನು ತಲೆದಂಡ ಮಾಡಲಾಗಿತ್ತು.

52a7074c-28be-4d5f-bd76-0af174cab78d

e20fca99-c34a-4bc1-8790-e8a2b7bc1be2

► Follow us on –  Facebook / Twitter  / Google+

Sri Raghav

Admin