ಕೆಆರ್‌ಎಎಸ್’ನಲ್ಲಿರುವ ನೀರನ್ನು ಕುಡಿಯುವ ಜೊತೆಗೆ ನಾಲೆಗಳಿಗೂ ಹರಿಸಿ : ಪುಟ್ಟಣ್ಣಯ್ಯ

puttannaih

ಮಂಡ್ಯ, ಅ.1-ಕೆಆರ್‌ಎಎಸ್ ಜಲಾಶಯದಲ್ಲಿರುವ ಉಳಿಕೆ ನೀರನ್ನು ಕುಡಿಯಲು ಬಳಸುವ ಜತೆಗೆ ಕೃಷಿ ಚಟುವಟಿಕೆಗಳಿಗೂ ಬಳಸಲು ನಾಲೆಗಳಿಗೆ ನೀರು ಹರಿಸಿ ಎಂದು ಶಾಸಕ ಮತ್ತು ಕರ್ನಾಟಕ ರೈತ ಸಂಘದ ಮುಖಂಡ ಪುಟ್ಟಣ್ಣಯ್ಯ ಸರ್ಕಾರವನ್ನು ಆಗ್ರಹಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಅರ್ಟಾನಿ ಜನರಲ್‌ಗೆ ಯಾವುದೇ ಅಕಾರವಿಲ್ಲ. ಜಲಾಶಯದಲ್ಲಿರುವ ಉಳಿದ ನೀರನ್ನು ಕುಡಿಯುವ ಜತೆಗೆ ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.  ಕಾವೇರಿ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪರ ನ್ಯಾಯವಾದಿ ಫಾಲಿ.ಎಸ್ ನಾರಿಮನ್ ವಾದ ಮಾಡಲು ಹಿಂದೆ ಸರಿದಿದ್ದು , ಅವರ ವೈಯಕ್ತಿಕ ಪ್ರತಿಷ್ಠೆಯಿಂದ ಇಂದು ರಾಜ್ಯ ಬಲಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.  ಕಾವೇರಿ ನೀರು ಸಂಬಂಸಿದಂತೆ ಕರ್ನಾಟಕಕ್ಕೆ ಶೇ.42, ತಮಿಳುನಾಡಿಗೆ 54 ಮತ್ತು ಕೇರಳಕ್ಕೆ 3.05ರಷ್ಟು ಹಕ್ಕಿದೆ. ಇದರಂತೆ ಕರ್ನಾಟಕಕ್ಕೆ ಕೂಡ ಹಕ್ಕಿರುವುದರಿಂದ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ತಮಿಳುನಾಡು ಅರ್ಥ ಮಾಡಿಕೊಂಡು ಕಾವೇರಿ ಸಮಸ್ಯೆಗೆ ಸರಿಯಾದ ನಿಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಕಾವೇರಿ ಸಮಸ್ಯೆ ಉದ್ಭವ ಆಗುವ ಮೊದಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಮಾರ್ಗೋಪಾಯಗಳನ್ನು ರೂಪಿಸಬೇಕಿತ್ತು. ಆದರೆ ಸರ್ಕಾರ ವಿಫಲವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾವೇರಿ ವಿವಾದದ ಕುರಿತಂತೆ ಸರ್ಕಾರ ಭಾರೀ ಇಕ್ಕಟ್ಟಿಗೆ ಸಿಲುಕಿದೆ. ಕಾವೇರಿ ಸಮಸ್ಯೆ ಪ್ರಧಾನಿ ಮಧ್ಯಸ್ಥಿತಿಕೆ ವಹಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ತಾವೂ ಬೆಂಬಲ ನೀಡುವುದಾಗಿ ಹೇಳಿದರು.

9ಕ್ಕೆ ಇಂಜಿನಿಯರ್‌ಗಳ ಸಭೆ: ಕಾವೇರಿ ನೀರು ಹಂಚಿಕೆ ಕುರಿತಾಗಿ ಇದೇ 9ರಂದು ಇಂಜಿನಿಯರ್‌ಗಳ ಸಭೆ ಕರೆದಿದ್ದು , ಈ ಸಭೆಯಲ್ಲಿ 9 ಇಂಜಿನಿಯರ್‌ಗಳ ಭಾಗವಹಿಸಲಿದ್ದಾರೆ. ತಮಿಳುನಾಡಿನ ಜಿಲ್ಲಾಕಾರಿ ಮಾಣಿಕ್ಯಂ ಕೂಡ ಸಭೆಯಲ್ಲಿ ಭಾಗವಹಿಸುತ್ತಿದ್ದು , ಈ ಮೊದಲೇ ಅವರು ಕಾವೇರಿ ನೀರು ಹಂಚಿಕೆ ಕುರಿತಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವರದಿ ರೂಪಿಸಿದ್ದರು. ಹಾಗಾಗಿ ಈ ಸಭೆಯಲ್ಲಿ ಕಾವೇರಿ ನೀರು ಹಂಚಿಕೆ ಕುರಿತಂತೆ ಶಾಶ್ವತ ಪರಿಹಾರ ಸೂಚಿಸುವ ವರದಿಯನ್ನು ತಯಾರಿಸಿ ರಾಜ್ಯ ಸರ್ಕಾರಕ್ಕೆ ನೀಡಲಿದ್ದೇವೆ ಎಂದು ತಿಳಿಸಿದರು.

► Follow us on –  Facebook / Twitter  / Google+

Sri Raghav

Admin