ಕೆಆರ್ ನಗರದಲ್ಲಿ ನಡೆದಿಲ್ಲ ಕೆರೆಗಳ ಸಂರಕ್ಷಣೆ

kr-nagar
ಕೆ.ಆರ್.ನಗರ, ಏ.20- ಮೈಸೂರಿನ ರಾಜ ವಂಶಸ್ಥರ ಕನಸಿನ ನಗರ ಹಾಗೂ ರಾಜ್ಯದಲ್ಲೇ ಅತಿ ಸುಂದರ ನಗರ ಎಂಬ ಖ್ಯಾತಿ ಪಡೆದಿರುವ ಕೆ.ಆರ್.ನಗರದ ಆಂಜನೇಯ ಬಡಾವಣೆಯಲ್ಲಿ ಪುರಾತನವಾದ ಕೆರೆಗಳ ಸಂರಕ್ಷಣೆ ಮಾಡುವ ಬದಲು ಕೆರೆಗಳನ್ನು ಮುಚ್ಚಿ ಅಕ್ರಮವಾಗಿ ನಿವೇಶನಗಳಾಗಿ ಮಾರ್ಪಡಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ರಾಜ್ಯದಲ್ಲಿ ಬರಗಾಲವಿದ್ದು ಸರ್ಕಾರ ಕೆರೆಗಳ ಸಂರಕ್ಷಣೆಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಿ ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸಲು ಹರ ಸಹಾಸ ಮಾಡಿದರೂ ಏನು ಪ್ರಯೋಜನವಾಗಿಲ್ಲ. ಇಲ್ಲಿ ನೋಡಿದರೆ ಕೆರೆಗಳ ಸಂರಕ್ಷಣೆ ಇಲ್ಲದೆ ಎಲ್ಲಾ ಕೆರೆಗಳು ಬತ್ತಿಹೋಗಿವೆ.

ಈ ಜಾಗವನ್ನು ಖಾಲಿ ನಿವೇಶನಗಳನ್ನಾಗಿ ಮಾಡಿ ಸರ್ಕಾರದ ನಿಯಮಗಳ ವಿರುದ್ಧ ತಲೆ ಎತ್ತತ್ತಿರುವ ಬಡಾವಣೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಮೂಖ ಪ್ರೇಕ್ಷಕನಂತೆ ಪುರಸಭೆ ನಿರ್ಲಕ್ಷ್ಯ ವಹಿಸಿದೆ. ಸರ್ಕಾರದ ನಿಯಮದಂತೆ ಹೈಟೆಕ್ಷನ್ ಕೆಳಗಡೆ ಮನೆ ನಿರ್ಮಾಣ ಮಾಡಬಾರದು ಎಂಬ ನಿಯಮ ಇದ್ದರು ಅದನ್ನು ಗಾಳಿಗೆ ತೊರಿ ಹೈಟೆಕ್ಷನ್ ಕೆಳಗಡೆ ಮನೆ ನಿರ್ಮಾಣ ಮಾಡುತ್ತಿದ್ದರೂ, ಇಲ್ಲಿನ ನಗರಯೋಜನಾ ಪ್ರಾಧಿಕಾರ ಏನು ಗೊತ್ತಿಲ್ಲದಂತೆ ಇರುವುದು ಅವರ ಬೇಜಾವಾದರಿಯನ್ನು ತೋರುತ್ತಿದೆ.

ಈಗಲಾದರೂ ಎಚ್ಚೆತ್ತುಕೊಂಡು ಅಕ್ರಮವಾಗಿ ನಿರ್ಮಾಣ ಮಾಡಿರುವ ಮನೆ, ನಿವೇಶನಗಳ ಬಗ್ಗೆ ಗಮನಹರಿಸಿ ಸರ್ಕಾರದ ಆಸ್ತಿಯನ್ನು ರಕ್ಷಿಸುವುದೆ ಹಾಗೂ ಕೆರೆಗಳ ಒತ್ತುವರಿ ಜೊತೆಗೆ ಕೆಲವು ಕಡೆ ಕೆರೆಗಳ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿರುವುದನ್ನು ತಡೆಯಬೇಕೆಂಬುವುದೆ ಬಡಾವಣೆಯ ನಿವಾಸಿಗಳ ಮನವಿ ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಉನ್ನತ ಅಧಿಕಾರಿಗಳ ಮೊರೆ ಹೋಗಬೇಕಾಗುತ್ತದೆ ಎಂದಿರುವ ಸಾರ್ವಜನಿಕರು, ಈಗಾಗಲೇ ಲೋಕಾಯುಕ್ತಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin