ಕೆಎಸ್‍ಆರ್‍ಟಿಸಿ ಚಾಲಕನಿಂದ ಪ್ರಯಾಣಿಕನ ಮೇಲೆ ಹಲ್ಲೆ

Spread the love

ಕೆ.ಆರ್.ಪೇಟೆ, ಏ.22-ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಟಿಕೆಟ್ ವಿತರಣೆಗೆ ಸಂಬಂಧಿಸಿದಂತೆ ಚಾಲಕ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ಮಾಡಿ ಬಸ್‍ನಿಂದ ಕೆಳಗೆ ಇಳಿಸಿರುವ ಘಟನೆ ಕೆ.ಆರ್.ಪೇಟೆ ಮತ್ತು ಪಾಂಡವಪುರ ಮಾರ್ಗದ ಮಧ್ಯೆ ನಡೆದಿದೆ.ಮಂಜುನಾಥ್ ಹಲ್ಲೆಗೆ ಒಳಗಾದ ಪ್ರಯಾಣಿಕ. ಮಂಜುನಾಥ್ ಪಾಂಡವಪುರದಿಂದ ಕೆ.ಆರ್.ಪೇಟೆಗೆ ಬರುವ ಸಲುವಾಗಿ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಹತ್ತಿಕೊಂಡಿದ್ದಾರೆ. ಇದೇ ಬಸ್‍ನಲ್ಲಿ ಚಾಲಕನ ಸಂಬಂಧಿಕರು ಹತ್ತಿದ್ದು, ಅವರಿಗೆ ಬಸ್ ನಿರ್ವಾಹಕ ಟಿಕೆಟ್ ನೀಡಿರಲಿಲ್ಲ.ಇದನ್ನು ಗಮನಿಸಿದ ಪ್ರಯಾಣಿಕ ಮಂಜುನಾಥ ನಿರ್ವಾಹಕರಿಗೆ ಅವರಿಗೂ ಟಿಕೆಟ್ ವಿತರಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಚಾಲಕ ನಮ್ಮ ಸಂಬಂಧಿಕರಿಗೆ ಟಿಕೆಟ್ ನೀಡಲ್ಲ ಎಂದು ಪ್ರಯಾಣಿಕ ಮಂಜುನಾಥ್‍ಗೆ ಧಮ್ಕಿ ಹಾಕಿದ್ದಾನೆ.

ಈ ವಿಷಯವಾಗಿ ಚಾಲಕ ಮತ್ತು ಪ್ರಯಾಣಿಕ ಮಂಜುನಾಥ್ ನಡುವೆ ಮಾತಿಗೆ ಮಾತು ಬೆಳೆದು ಚಾಲಕ ತನ್ನ ಸಂಬಂಧಿಕರೊಂದಿಗೆ ಸೇರಿ ಮಂಜುನಾಥ್‍ನ ಮೇಲೆ ಹಲ್ಲೆ ಮಾಡಿ ಬಸ್‍ನಿಂದ ಹೊರ ಹಾಕಿದ್ದರು.ಇದರಿಂದ ಗಾಯಾಳಾದ ಮಂಜುನಾಥ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಿಂದ ಕುಪಿತರಾದ ಪ್ರಯಾಣಿಕರು ಚಾಲಕ ಮತ್ತು ನಿರ್ವಾಹಕರಿಗೆ ತೀವ್ರ ತರಾಟೆ ತೆಗೆದುಕೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin