ಕೆಪಿಎಸ್ಸಿಯಲ್ಲಿ 571 ಗ್ರೂಪ್ ‘ಸಿ’ ತಾಂತ್ರಿಕೇತರ ಹುದ್ದೆಗಳ ನೇಮಕಾತಿ

Spread the love

job

ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಕೆಳಕಂಡ ಗ್ರೂಪ್ “ಸಿ” ವೃಂದದ ತಾಂತ್ರಿಕೇತರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು  ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ವಿವರ : ಒಟ್ಟು ಹುದ್ದೆಗಳು  :  571 

ಪೌರಡಳಿತ ನಿರ್ದೇಶನಾಲಯದಲ್ಲಿನ (ನಗರ ಸ್ಥಳೀಯ ಸಂಸ್ಥೆಯ ಸಂಸ್ಥೆಗಳು)ಮುಖ್ಯಾಧಿಕಾರಿ ಶ್ರೇಣಿ -2 : 34 ಹುದ್ದೆಗಳು
ಪೌರಡಳಿತ ನಿರ್ದೇಶನಾಲಯದಲ್ಲಿನ(ನಗರ ಸ್ಥಳೀಯ ಸಂಸ್ಥೆಯ ಸಂಸ್ಥೆಗಳು)ಅಕೌಂಟೆಂಟ್ : 26 ಹುದ್ದೆಗಳು
ಪೌರಡಳಿತ ನಿರ್ದೇಶನಾಲಯದಲ್ಲಿನ(ನಗರ ಸ್ಥಳೀಯ ಸಂಸ್ಥೆಯ ಸಂಸ್ಥೆಗಳು)ಪ್ರಥಮದರ್ಜೆಕಂದಾಯ ನಿರೀಕ್ಷಕರು : 37 ಹುದ್ದೆಗಳು
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರಇಲಾಖೆಯಲ್ಲಿ ಲೆಕ್ಕ ಸಹಾಯಕರು : 149 ಹುದ್ದೆಗಳು

ಸಮಾಜ ಕಲ್ಯಾಣಇಲಾಖೆಯ ವಸತಿ ಶಾಲೆಗಳಲ್ಲಿನ ವಸತಿ ಶಾಲಾ ಶಿಕ್ಷಕರು : 123 ಹುದ್ದೆಗಳು
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರಇಲಾಖೆಯಲ್ಲಿಕಿರಿಯ ಲೆಕ್ಕ ಸಹಾಯಕರು : 42 ಹುದ್ದೆಗಳು
ಕಾಲೇಜು ಶಿಕ್ಷಣ ಇಲಾಖೆಯಲ್ಲಿಗ್ರಂಥಾಲಯ ಸಹಾಯಕರು : 29 ಹುದ್ದೆಗಳು
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಡಾಟಾಎಂಟ್ರಿಆಪರೇಟರ್ : 01 ಹುದ್ದೆ
ಪೌರಾಡಳಿತ ನಿರ್ದೇಶನಾಲಯದಲ್ಲಿನ (ನಗರ ಸ್ಥಳಿಯ ಸಂಸ್ಥೆಗಳು) : 101 ಹುದ್ದೆಗಳು
ಕೃಷಿ ಮಾರಾಟಇಲಾಖೆಯಲ್ಲಿನ ಮಾರಾಟ ಸಹಾಯಕರು : 25 ಹುದ್ದೆಗಳು
ಕರ್ನಾಟಕ ಸರ್ಕಾರ ಸಚಿವಾಲಯಗ್ರಂಥಾಲಯದಗ್ರಂಥಾಲಯ ಸಹಾಯಕರು : 04 ಹುದ್ದೆಗಳು

+ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-04-1017 ( ರಾತ್ರಿ 11-45 ಘಂಟೆಯೊಂಳಗೆ)

+ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 17-04-2017 (ಅಂಚೆ ಕಛೇರಿಯ ಕಾರ್ಯದ ವೇಳೆಯೊಳಗೆ/ Debit card /credit card / Net banking ಮೂಲಕ ಶುಲ್ಕ ಪಾವತಿಗೆರಾತ್ರಿ 11.45,ಗಂಟೆಯೊಳಗೆ)

+ ವಿಶೇಷ ಸೂಚನೆ :

+ ಸದರಿ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ “ಆನ್ ಲೈನ್” ಮೂಲಕ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಆಧಾರ್‍ ಸಂಖ್ಯೆಯನ್ನು ತಪ್ಪದೇ ಅರ್ಜಿಯಲ್ಲಿ ಭರ್ತಿ ಮಾಡತಕ್ಕದ್ದು, ಆಧಾರ್‍ಕಾರ್ಡ್‍ನ್ನು ಮಾಡಿಸದೆ ಇವರು ಅಭ್ಯರ್ಥಿಗಳು ಈ ಅಧಿಸೂಚನೆಯನ್ನು ಹೊರಡಿಸಿದ ತಕ್ಷಣ ಆಧಾರ್‍ಕಾರ್ಡ್‍ನ್ನು ಮಾಡಿಸಿ, ಅರ್ಜಿಯಲ್ಲಿ ತಪ್ಪದೇ ನಮೂದಿಸತಕ್ಕದ್ದು.

+ ಅಭ್ಯರ್ಥಿಗಳು ಒಂದಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ, ಅರ್ಜಿಸಲ್ಲಿಸುವಾಗ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸತಕ್ಕದ್ದು, ಆದರೆ ಒಂದಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೂ ಎಲ್ಲಾ ಹುದ್ದೆಗಳಿಗೂ ಸೇರಿಒಂದೆಅರ್ಜಿಯನ್ನು ಸಲ್ಲಿಸತಕ್ಕದ್ದು ಹಾಗೂ ಒಂದೇ ಶುಲ್ಕವನ್ನು ಪಾವತಿಸತಕ್ಕದ್ದು.

+ ಯಾವುದೇ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಬಾರಿ ಅರ್ಜಿ ಸಲ್ಲಿಸಿದಲ್ಲಿ ಆಧಾರ್, ಸಂಖ್ಯೆಯಳ್ಳ ಅರ್ಜಿಯನ್ನು ಪರಿಗಣಿಸಿ ಉಳಿದಂತಹ ಅರ್ಜಿಗಳನ್ನು ಯಾವುದೇ ಮುನ್ಸೂಚನೆಯಿಲ್ಲದೇ ತಿರಸ್ಕರಿಸಲಾಗುವುದು.

ಅರ್ಜಿಗಳನ್ನು ಆನ್-ಲೈನ್ (ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

+ ಶುಲ್ಕದ ವಿವರಗಳು :

ಸಾಮಾನ್ಯ ಅಭ್ಯರ್ಥಿಗಳಿಗೆ : 300
ಪ್ರವರ್ಗ 2(ಎ) , 2(ಬಿ), 3(ಎ) ಮತ್ತು 3 (ಬಿ) ಅಭ್ಯರ್ಥಿಗಳಿಗೆ : 150 ರೂ.
ಮಾಜಿ ಸೈನಿಕರಿಗೆ : 25 ರೂ.
ಪರಿಶಿಷ್ಟ ಜಾತಿ, ಪರಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿಯಿರುತ್ತದೆ.

ಆನ್-ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡುವ ಸಂಅಂದರ್ಭದಲ್ಲಿ ಯಾವುದೇ ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ ಸಂಖ್ಯೆ 7815930294,7815930293,7815930296 ಮತ್ತು 7815930297 ಮೂಲಕ ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ಅಥವಾ ಅರ್ಜಿಯಲ್ಲಿ ನೀಡಿರುವ ಇ-ಮೇಲ್ ಸಹಾಯಕದ ಮೂಲಕ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ

ಹೆಚ್ಚಿನ ವಿವರಗಳಿಗಾಗಿ :  www.kpsc.kar.nic.in

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin