ಕೆಪಿಜೆಪಿಗೆ ಉಪ್ಪಿ ರಾಜೀನಾಮೆ, ಯಾವುದೇ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟನೆ

Spread the love

Upendra-v-02

ಬೆಂಗಳೂರು, ಮಾ.6- ಕೆಪಿಜೆಪಿಗೆ ರಾಜೀನಾಮೆ ಘೋಷಿಸಿರುವ ನಟ ಉಪೇಂದ್ರ ತಾವು ಯಾವುದೇ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಖಾಸಗಿ ರೆಸಾರ್ಟ್‍ನಲ್ಲಿ ಇಂದು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ನಮ್ಮ ಬೆಂಬಲಿಗರ ಬಹುಮತದ ಅಭಿಪ್ರಾಯದಂತೆ ಪ್ರಜಾಕಿಯ ಹೊಸ ಪಕ್ಷವನ್ನು ಕಟ್ಟುವುದಾಗಿ ತಿಳಿಸಿದರು. ತಾವು ಬೇರೆ ಪಕ್ಷಗಳಿಗೆ ಹೋಗುವುದಾಗಿ ಸುದ್ದಿಗಳು ಹರಡಿವೆ. ಆದರೆ, ಈ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪ್ರಜಾಕಿಯ ಕಾನ್‍ಸೆಪ್ಟ್ ಇಟ್ಟುಕೊಂಡೇ ಮುಂದುವರೆಯಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಪಕ್ಷ ಸ್ಥಾಪನೆ ಸಂಬಂಧ ವಕೀಲರೊಂದಿಗೆ ಚರ್ಚಿಸುತ್ತೇನೆ. ಪಕ್ಷದ ನೋಂದಣಿ ನಂತರ ಚಿಹ್ನೆ ಸಿಗಲಿದೆ. ಸಾಧ್ಯವಾದರೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆ ಇದೆ. ಸಾಧ್ಯವಾಗದಿದ್ದರೆ ಮುಂದೆ ನೋಡೋಣ ಎಂದು ಹೇಳಿದರು. ಕೆಪಿಜೆಪಿಯಲ್ಲಿ ಕೆಲವು ಗೊಂದಲ ಸೃಷ್ಟಿಯಾಗಿತ್ತು. ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದೆವು. ಆದರೆ, ಸಾಧ್ಯವಾಗಿಲ್ಲ. ಹಾಗಾಗಿ ಒಮ್ಮತದ ನಿರ್ಧಾರ ತೆಗೆದುಕೊಂಡು ನಾನು ಆ ಪಕ್ಷದಿಂದ ಹೊರ ಬಂದಿದ್ದೇನೆ ಎಂದರು.

Facebook Comments

Sri Raghav

Admin