ಕೆಲಸ ಕೊಡಲು ಹಿಂದೇಟು ಹಾಕುತ್ತಿರುವ ಪಿಡಿಓ ಅಮಾನತಿಗೆ ಆಗ್ರಹ

17

ಗದಗ,ಮಾ.15- ಕೆಲಸ ಕೊಡಲು ಹಿಂದೇಟು ಹಾಕಿದ ಪಂಚಾಯತಿ ಪಿಡಿಓ ಅಮಾನತಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಗೋಗೇರಿ ಗ್ರಾಮ ಪಂಚಾಯತಿ ಎದುರಿಗೆ ಇಂದು ಕೂಲಿಕಾರರು ಪ್ರತಿಭಟನೆ ಮಾಡಿದರು.ಕೆಲಸಕ್ಕಾಗಿ ಒತ್ತಾಯಿಸಿ ಮಾಟರಂಗಿ ಗ್ರಾಮದ ಜನರು ತಿಂಗಳ ಹಿಂದೆಯೆ ನರೇಗಾ ಕೆಲಸಕ್ಕೆ ಸಾಮೂಹಿಕವಾಗಿ ಅರ್ಜಿ ಸಲ್ಲಿಸಿದ್ದು ಅದರ ಭಾಗವಾಗಿ ಕೇವಲ 5 ದಿನ ಮಾತ್ರ ಕೆಲವರಿಗೆ ಕೆಲಸ ನೀಡಿ ನಂತರ ಅವರಿಗೂ ಕೆಲಸ ಕೊಡದೇ ಹತ್ತು ದಿನದಿಂದ ಕೂಲಿಕಾರರು ಗ್ರಾಮ ಪಂಚಾಯತಿಗೆ ಕೆಲಸ ಕೊಡಿ ಎಂದು ಅಲೆದಾಡಿದರು ಕೆಲಸ ಸಿಗದೆ ಇಂದು ನಾಳೆ ಎಂದು ಸತಾಯಿಸುತ್ತಿದ್ದರು. ಕೊನೆಗೂ ಕೂಲಿಕಾರರು ಬೇಸತ್ತು ಕೆಲಸ ಬೇಕೆ ಬೇಕು ಎಂದು ಪಂಚಾಯತಿ ಎದುರಿಗೆ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತರಂಗಿ ಗ್ರಾಮದ ಕೃಷಿ ಕೂಲಕಾರರ ಸಂಘದ ಅಧ್ಯಕ್ಷರಾದ ಕರಿಯಮ್ಮ ಗುರಿಕಾರ ಮಾತನಾಡಿ ಕೂಲಕಾರರಿಗೆ ಕೆಲಸ ಕೊಡದೇ ರಾಜಕೀಯ ಮಾಡುತ್ತಿರುವ ಪಿ.ಡಿ.ಓ ಚನ್ನಪ್ಪ ಇಮರಾನಪೂರ ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿದರು. ನಾವು ಮಾಟರಂಗಿ ಹಾಗೂ ಗೋಗೇರಿ ಗ್ರಾಮಗಳಿಂದ 150 ಕುಟುಂಬದವರಿಂದ ಕೆಲಸಕ್ಕೆ ಸಾಮೂಹಿಕ ಅರ್ಜಿ ಹಾಕಿಸಿದ್ದು ಒಂದು ತಿಂಗಳು ಕಳೆಯುತ್ತ ಬಂದರೂ ಗೋಗೇರಿ ಗ್ರಾಮದ ಕೂಲಿಕಾರರಿಗೆ ಕೆಲಸವು ಕೊಡದೇ ಮತ್ತು ನಿರುದ್ಯೋಗ ಭತ್ಯೆ ನೀಡದೇ ಅನಿವಾರ್ಯವಾಗಿ ಪಂಚಾಯತಿ ಎದುರು ಪ್ರತಿಭಟನೆ ನಡೆಸಲಾಗಿದೆ. ಈ ಪರಸ್ಥಿತಿಯನ್ನು ತಾಲಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಹಲವಾರು ಬಾರಿ ಸಂಪರ್ಕಿಸಿ ಅಹವಾಲು ತೋಡಿಕೊಂಡರು ಪ್ರಯೋಜನವಾಗಿಲ್ಲ. ಇದು ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಯ ಬೇಜವಾಬ್ದಾರಿತನ ಎತ್ತಿ ತೋರಿಸುತ್ತದೆ. ಹಾಗಾಗಿ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ತಕ್ಷಣ ಗಮನ ಹರಿಸಿ ಕೂಲಿಕಾರರಿಗೆ ಕೆಲಸ ಕೊಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಕೃಷಿ ಕೂಲಿಕಾರರ ಸಂಘದ ತಾಲೂಕ ಕಾರ್ಯದರ್ಶಿ ಶಿವು ಚವ್ಹಾಣ ಮಾತನಾಡಿ ಗ್ರಾಮದ ಜನರು ಗುಳೆ ಹೋಗುವದನ್ನು ತಪ್ಪಿಸಿ ಗ್ರಾಮದಲ್ಲಿಯೇ ಕೆಲಸ ಸಿಗುತ್ತದೆ.  ಅದು ನರೇಗಾ ಖಾತರಿ ಯೋಜನೆಯಲ್ಲಿ ಎಂದು ನಾವು ಜಗೃತಿ ಕಾರ್ಯಕ್ರಮ ಮಾಡಿ ಸಾಮೂಹಿಕವಾಗಿ ಅರ್ಜಿ ಸಲ್ಲಿಸಿದ್ದು ಅಧಿಕಾರಿಗಳು ಜನರಿಗೆ ಕೆಲಸ ಕೊಡಲು ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಬರಗಾಲದಂತಹ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕೆಲವು ಕಡೆ ಹೋಗಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಜನರೆ ನೇರವಾಗಿ ಕೆಲಸಕ್ಕೆ ಅರ್ಜಿ ಹಾಕಿದ ಪಂಚಾಯತಿಗಳ ಕಡೆ ಗಮನ ಹರಿಸಬೇಕು ಎಂದರು. ಗೋಗೇರಿ ಗ್ರಾಮದ ಕೂಲಿಕಾರರು ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಕೆಲಸ ಕೊಡದ ಹಿನ್ನಲೆಯಲ್ಲಿ ನಿರುದ್ಯೋಗ ಭತ್ಯೆ ಕೊಡಬೇಕು ಹಾಗೂ ತಕ್ಷಣದಿಂದ ಜನರಿಗೆ ಕೆಲಸ ಕೊಡಲು ಮುಂದಾಗಬೇಕು. ಕೆಲಸ ಕೊಡದೇ ಹೋದರೆ ನಾಳೆಯಿಂದ ಪಂಚಾಯತಿ ಎದುರಿಗೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಎಚ್ಚರಿಸದರು. ಧರಣಿಯಲ್ಲಿ ತಮ್ಮಣ್ಣ ಗುರಿಕಾರ, ದೇವವ್ವ ಗುರಿಕಾರ, ಮೈಲಾರಪ್ಪ ಗುರಿಕಾರ, ಈರಣ್ಣ ಹೂಗಾರ, ಕಳಕಪ್ಪ ಹೂಗಾರ, ದೇವೆಂದ್ರಪ್ಪ ಗೌಡ್ರ, ಸುರೇಶ ಗುರಿಕಾರ, ಈರವ್ವ, ಸಕ್ರಗೌಡ, ಮುಂತಾದವರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin