ಕೆಸರನಿಂದ ಹೊಂಡಕ್ಕೆ ಬಿದ್ದು ನರಳಾಡುತ್ತಿದ್ದ ಮರಿಯಾನೆ ರಕ್ಷಣೆ
ಹಾಸನ, ಮಾ.12- ಕೆಸರನಿಂದ ಹೊಂಡಕ್ಕೆ ಬಿದಿದ್ದ ಮರಿ ಆನೆಯೊಂದ್ನು ಜೆಸಿಬಿ ನೆರವಿನಿಂದ ಹೊರತೆಗೆದು ರಕ್ಷಿಸಲಾಗಿದೆ. ಜಿಲ್ಲೆಯ ಆಲೂರು ತಾಲ್ಲೂಕಿನ ಮಾದಿಹಳ್ಳಿಗೆ ನೀರು ಹರಿಸಿಕೊಂಡು ಮರಿ ಆನೆಯೊಂದು ಬಂದಿದೆ. ಈ ವೇಳೆ ಅಕಸ್ಮಾತಾಗಿ ಕೆಸರಿನ ಹೊಂಡಕ್ಕೆ ಬಿದ್ದಿದ್ದು , ಮೇಲೆಳೆಲು ಹರಸಾಹಸ ಪಡುತ್ತಿತ್ತು. ರಾತ್ರಿಯೆಲ್ಲ ಹೊಂಡದಲ್ಲೇ ಬಿದ್ದಿತ್ತು. ಆನೆಯ ಚೀರಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಬಂದು ಪರಿಶೀಲಿಸಿ ತಕ್ಷಣವೇ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲಿಸಿ ಮರಿಯಾನೆಯನ್ನು ಜೆಸಿಬಿಮೂಲಕ ಮೇಲೆತ್ತಿ ರಕ್ಷಿಸಿದ್ದಾರೆ.
ನೀರು ಹರಿಸಿ ಬರುವ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸುತ್ತಿವೆ.