ಕೇಂದ್ರ ಕೃಷಿ ಹೆಚ್ಚುವರಿ ಕಾರ್ಯದರ್ಶಿ ಭೇಟಿ ಬರ ಅಧ್ಯಯನ

Spread the love

11

ಬೆಳಗಾವಿ,ಫೆ10- ಕೇಂದ್ರ ಕೃಷಿ ಸಹಕಾರ ಹಾಗೂ ರೈತ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಲಜ್ ಶ್ರೀವಾತ್ಸವ ನೇತೃತ್ವದ ತಂಡ ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ತೆರಳಿ ಬರ ಅಧ್ಯಯನ ನಡೆಸಿದರು. ಜಿಲ್ಲಾಧಿಕಾರಿ ಎನ್.ಜಯರಾಂ, ಸಿಇಒ ರಾಮಚಂದ್ರನ್, ಎಸಿ ಭಜಂತ್ರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಬರ ಅಧ್ಯಯನ ತಂಡದೊಂದಿಗೆ ತೆರಳಿದರು.ಬೈಲಹೊಂಗಲ ತಾಲೂಕು ಮುರಕಿಭಾವಿ ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೋರಿ, ಜಾನುವಾರುಗಳಿಗೆ ಮೇನ ಕೊರತೆಯಾದ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಬಳಿ ನಿವೇದಿಸಿದರು.ಮುರಕಿಬಾವಿ ಯಿಂದ ಗುಜನಾಲ, ತಡಸಲೂರು, ಬಿಡಕಿ, ಚಂದರಗಿ, ಬೂದಿಗೊಪ್ಪ, ಗೊಡಚಿ, ಸೇರಿದಂತೆ ಬೆಲಹೊಂಗಲ, ರಾಮದುರ್ಗ, ಸವದತ್ತಿ, ತಾಲೂಕಿನ ತೀವ್ರ ಬರಪೀಡಿತ ಹಳ್ಳಿಗಳಿಗಗೆ ತಂಡ ತೆರಳಿ ಭಯಾನಕ ಬಿಸಿಲಿನ ಡಾವರ, ಕುಡಿಯುವ ನೀರಿನ ಕೊರತೆ, ಒಣಗಿದ ಬೆಳೆ, ನರೇಗಾ ಉದ್ಯೋಗ ಖಾತರಿ ಸೇರಿದಂತೆ ಜನತೆಯ ಹತ್ತಾರು ಸಮಸ್ಯೆಗಳನ್ನು ಖುದ್ದು ಆಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin