ಕೇಂದ್ರ ಗೃಹ ಸಚಿವಾಲಯದ ವೆಬ್ಸೈಟ್ ಹ್ಯಾಕ್

Hack

ನವದೆಹಲಿ, ಫೆ.12 : ಕೇಂದ್ರ ಗೃಹ ಸಚಿವಾಲಯದ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ. ಈ ಬಗ್ಗೆ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ನ್ಯಾಷನಲ್ ಇನ್ಫಾರ್ಮೇಟಿಕ್ಸ್ ಸೆಂಟರ್ ಸಚಿವಾಲಯದ ವೆಬ್ ಸೈಟ್’ನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿದ್ದು, ಈ ಬಗ್ಗೆ ಕೂಲಕಂಷ ತನಿಖೆಗೆ ನಡೆಸುವುದಾಗಿ ತಿಳಿಸಿದ್ದಾರೆ.  ಕಳೆದ ತಿಂಗಳು, ರಾಷ್ಟ್ರೀಯ ಭದ್ರತಾ ಸಂಸ್ಥೆಯ (ಎನ್ಎಸ್ ಜಿ) ವೆಬ್ ಸೈಟ್ ಅನ್ನು ಹ್ಯಾಕ್ ಮಾಡಲಾಗಿತ್ತು. ಅದನ್ನು ಪಾಕಿಸ್ತಾನ ಮೂಲದ ಹ್ಯಾಕರ್ ಗಳೇ ಹ್ಯಾಕ್ ಮಾಡಿರುವ ಬಗ್ಗೆ ಅನುಮಾನಗಳಿದ್ದವು. ಈ ಬಾರಿಯೂ ಅಂಥದ್ದೇ ಪಾಕ್ ಪರ ಹ್ಯಾಕರ್ ಗಳೇ ಗೃಹ ಸಚಿವಾಲಯದ ವೆಬ್ ಸೈಟ್ ಗೆ ಕನ್ನ ಹಾಕಿರಬಹುದೆಂದು ಅಂದಾಜಿಸಲಾಗಿದೆ.

700 ಸರ್ಕಾರಿ ವೈಬ್‍ಸೈಟ್‍ಗಳಿಗೆ ಕನ್ನ :

ಕಳೆದ ಮೂರು ವರ್ಷಗಳ (2013 ರಿಂದ 2016ರ) ಅವಧಿಯಲ್ಲಿ ಕೇಂದ್ರ ಸರ್ಕಾರ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳ 700ಕ್ಕೂ ಹೆಚ್ಚು ವೆಬ್‍ಸೈಟ್‍ಗಳಿಗೆ ಕನ್ನ ಹಾಕಲಾಗಿದೆ ಎಂದು ಲೋಕಸಭೈಗೆ ಮಾಹಿತಿ ನೀಡಲಾಗಿದೆ. ಮಾಹಿತಿ ತಂತ್ರಜ್ಞಾನ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್(ಸಿಇಆರ್‍ಟಿ-ಐಎನ್) ನೀಡಿರುವ ಮತ್ತು ಪತ್ತೆ ಮಾಡಿರುವ ಮಾಹಿತಿ ಪ್ರಕಾರ 2016ರಲ್ಲಿ ಕೇಂದ್ರ ಸರ್ಕಾರ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳ 199 ವೆಬ್‍ಸೈಟ್‍ಗಳಿಗೆ ಹ್ಯಾಕ್ ಮಾಡಲಾಗಿದೆ. 2015ರಲ್ಲಿ 164, 2014ರಲ್ಲಿ 155 ಮತ್ತು 2013ರಲ್ಲಿ 189 ಪ್ರಕರಣಗಳು ದಾಖಲಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin