ಕೇಂದ್ರ ಸರ್ಕಾರಕ್ಕೆ 30,000 ರೂ. ದಂಡ ವಿಧಿಸಿದ ಸುಪ್ರೀಂಕೋರ್ಟ್

Spread the love

Supreme_Court_of_India_-_Retouched

ನವದೆಹಲಿ, ಫೆ.6- ವಿಶೇಷ ಅನುದಾನದಡಿ ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದ ಸೌಲಭ್ಯ-ಸವಲತ್ತುಗಳನ್ನು ಬಹುಸಂಖ್ಯಾತ ಮುಸ್ಲಿಮರು ಅನುಭವಿಸುತ್ತಿದ್ದಾರೆ. ಈ ಕುರಿತಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಪ್ರತ್ಯುತ್ತರ ಸಲ್ಲಿಸದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ 30,000 ರೂ. ದಂಡ ವಿಧಿಸಿದೆ.   ಇನ್ನೆರಡು ವಾರಗಳ ಒಳಗೆ ಈ ಮೊತ್ತವನ್ನು ಠೇವಣಿ ಇರಿಸಿದ ನಂತರ ಪ್ರತ್ಯುತ್ತರ ಸಲ್ಲಿಸಲು ಕೇಂಧ್ರದ ಪರ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ಒಳಗೊಂಡ ಪೀಠವು ಅವಕಾಶ ನೀಡಿದೆ. ಅಲ್ಲದೇ ಇದೇ ಕಾರಣಕ್ಕಾಗಿ ಕಳೆದ ಬಾರಿ 15,000 ರೂ. ದಂಡ ವಿಧಿಸಿದ್ದನ್ನೂ ಪೀಠವು ಉಲ್ಲೇಖಿಸಿದೆ.

ಈ ವಿಷಯವು ಬಹು ಮುಖ್ಯವಾಗಿದೆ ಹಾಗೂ ಪ್ರತ್ಯುತ್ತರ ಸಲ್ಲಿಸಲು ಇದು ಕೇಂದ್ರಕ್ಕೆ ಕೊನೆ ಅವಕಾಶ ನೀಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ಸಹ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin