ಕೇಂದ್ರ ಸರ್ಕಾರದಿಂದ 2.8 ಲಕ್ಷ ಸಿಬ್ಬಂದಿ ನೇಮಕ, ಐಟಿ ಇಲಾಖೆಯಲ್ಲೇ ಸಿಂಹಪಾಲು
ನವದೆಹಲಿ, ಮಾ.2-ಕೇಂದ್ರ ಸರ್ಕಾರವು ವಿವಿಧ ಇಲಾಖೆಗಳಲ್ಲಿ 2.80 ಲಕ್ಷ ಸಿಬ್ಬಂದಿ ನೇಮಕಕ್ಕೆ ಬಜೆಟ್ನಲ್ಲಿ ಸಮ್ಮತಿ ನೀಡಿದ್ದು, ವಿವಿಧ ಇಲಾಖೆಗಳಲ್ಲಿ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ನೋಟು ಅಮಾನ್ಯದ ನಂತರ ಕಾಳಧನ ವಿರುದ್ಧ ದೇಶಾದ್ಯಂತ ಸಮರ ಸಾರಿದ್ದ ಆದಾಯ ತೆರಿಗೆ ಇಲಾಖೆಗೆ ನೇಮಕಾತಿಯಲ್ಲಿ ಸಿಂಹಪಾಲು ಲಭಿಸಲಿದೆ. 2018ರ ಮಾರ್ಚ್ ವೇಳೆಗೆ ಐಟಿ ಇಲಾಖೆಯ ಸಿಬ್ಬಂದಿ ಸಾಮಥ್ರ್ಯವು 46,000 ದಿಂದ 80,000ಕ್ಕೆ ಏರಲಿದೆ. ಮಹತ್ವಾಕಾಂಕ್ಷಿ ಜಿಎಸ್ಟಿ (ಸರಕುಗಳು ಮತ್ತು ಸೇವೆಗಳ ತೆರಿಗೆ) ವ್ಯವಸ್ಥೆ ಜÁರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಕಸ್ಟಮ್ಸ್ ಮತ್ತು ಅಬಕಾರಿ ಇಲಾಖೆಗೆ ಹೆಚ್ಚುವರಿಯಾಗಿ 41,000 ಮಾನವ ಸಂಪನ್ಮೂಲ ಲಭಿಸಲಿದೆ. ಅಂದರೆ ಇಲಾಖೆಯಲ್ಲಿ ಈಗಿರುವ ಸಿಬ್ಬಂದಿ ಸಾಮಥ್ರ್ಯವು 50,600 ರಿಂದ 91,700ಕ್ಕೆ ಏರಲಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ 2017ನೇ ಸಾಲಿನ ಮುಂಗಡ ಪತ್ರದಲ್ಲಿ ರೈಲ್ವೆ ಇಲಾಖೆಯ ಮಾನವ ಸಂಪನ್ಮೂಲ ಹೆಚ್ಚಿಸಿಲ್ಲ. ರಕ್ಷಣಾ ಇಲಾಖೆ ನಂತರ ಅತಿ ಹೆಚ್ಚು ಉದ್ಯೋಗಿಗಳನ್ನು (13.31 ಲಕ್ಷ) ರೈಲ್ವೆ ಹೊಂದಿದೆ.
< Eesanje News 24/7 ನ್ಯೂಸ್ ಆ್ಯಪ್ >