ಕೇರಳದ ಎರ್ನಾಕುಲಂನಲ್ಲಿ ನದಿಗೆ ಬಿದ್ದು ನಾಲ್ವರು ನೀರು ಪಾಲು

4-Kiled

ಎರ್ನಾಕುಲಂ(ಕೇರಳ),ಡಿ.17-ರೆಸಾರ್ಟ್ ಮಾಲೀಕ ಸೇರಿದಂತೆ ನಾಲ್ವರು ನೀರು ಪಾಲಾಗಿರುವ ದುರ್ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತರನ್ನು ಪೆರಿಯಾರ್ ನದಿ ದಡದಲ್ಲಿರುವ ಐಷಾರಾಮಿ ರೆಸಾರ್ಟ್ ಮಾಲೀಕ ಬೆನ್ನಿ ಅಬ್ರಹಾಂ, ವಿದ್ಯಾರ್ಥಿಗಳಾದ ಕೇರಳದ ಕೆನತ್ ಜೋಸ್, ಬಿಹಾರ ಮೂಲದ ಅನುಭವ್ ಚಂದ್ರ ಹಾಗೂ ಆದಿತ್ಯ ಪಟೇಲ್ ಎಂದು ಗುರುತಿಸಲಾಗಿದೆ. ದೆಹಲಿಯಿಂದ 13 ಜನರ ವಿದ್ಯಾರ್ಥಿಗಳ ತಂಡವೊಂದು ತಮ್ಮ ಸ್ನೇಹಿತೆಯ ತಂದೆ ಬೆನ್ನಿ ಅಬ್ರಹಾಂ ಅವರ ಐಷಾರಾಮಿ ರೆಸಾರ್ಟ್ ಟ್ರಿಪ್ ಬಂದಿದ್ದರು. ಈ ಸಂದರ್ಭ ವಿದ್ಯಾರ್ಥಿಯೊಬ್ಬ ಪೆರಿಯಾರ್ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದಾನೆ.  ಅವನನ್ನು ರಕ್ಷಿಸಲು ಹೋದ ರೆಸಾರ್ಟ್ ಮಾಲೀಕ ಬೆನ್ನಿ ಅಬ್ರಹಾಂ ಮತ್ತು ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin