ಕೇರಳದ ಮಲಪ್ಪುರಂನ ಜಿಲ್ಲಾ ಕಲೆಕ್ಟರೇಟ್ ಕಚೇರಿ ಬಳಿ ಬಾಂಬ್ ಸ್ಫೋಟ

Kerala-Blast

ತಿರುವನಂತಪುರಂ, ನ.01 : ಮಲಪ್ಪುರಂನ ಜಿಲ್ಲಾ ಕಲೆಕ್ಟರೇಟ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿದ್ದ ಬಾಂಬ್ ಸ್ಫೋಟ ಸಂಭವಿಸಿದ್ದು. ಪಾರ್ಕಿಂಗ್ ನಲ್ಲಿದ್ದ ಮೂರು ವಾಹನಗಳು ಜಖಂಗೊಂಡಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಫೋಟಗೊಂಡ ಕಾರಿನ ಬಳಿ ಬ್ರೀಫ್ ಕೇಸ್ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯದಳ, ಶ್ವಾನದಳ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ನಂತರ ಕೆಲ ಕಾಲ ಆತಂಕದ ವಾತಾವರಣೆ ಉಂಟಾಗಿತ್ತು. ಆದರೆ, ಈಗ ಪರಿಸ್ಥಿತಿ ತಿಳಿಗೊಂಡಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಘಟನೆಯಲ್ಲಿ ಸಾವು ನೋವುಗಳು ಸಂಭವಿಸಿಲ್ಲ. ಇದೊಂದು ಕಡಿಮೆ ತೀವ್ರತೆಯ ಸ್ಫೋಟ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಅಲ್ ಉಮ್ಮಾ ಎಂಬ ಉಗ್ರ ಸಂಘಟನೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

► Follow us on –  Facebook / Twitter  / Google+

Sri Raghav

Admin