‘ಕೇಸರಿ’ ಸಿನಿಮಾ ಸೆಟ್ ನಲ್ಲಿ ಭಾರೀ ಅಗ್ನಿ ಆಕಸ್ಮಿಕ

Kesari-Akshay--01

ಸತಾರ, ಏ.25-ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಐಸಿಹಾಸಿಕ ಕೇಸರಿ ಸಿನಿಮಾ ಸೆಟ್ನಲ್ಲಿ ಭಾರೀ ಅಗ್ನಿ ಆಕಸ್ಮಿಕ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಅಪಾರ ನಷ್ಟ ಉಂಟಾಗಿದ್ದರೂ, ಅದೃಷ್ಟವಶಾತ್ ಸಾವು-ನೋವು ಸಂಭವಿಸಿಲ್ಲ. ಮಹಾರಾಷ್ಟ್ರದ ಸತಾರದಿಂದ 30 ಕಿ.ಮೀ. ದೂರವಿರುವ ವೈ ತಹಸೀಲ್ ನ ಪಿಂಪೋಡ್ ಬುದ್ರುಂಕ್ ಗ್ರಾಮದಲ್ಲಿ ಹಾಕಲಾಗಿದ್ದ ಸೆಟ್ನಲ್ಲಿ ನಿನ್ನೆ ಚಿತ್ರೀಕರಣ ನಡೆಯುತ್ತಿದ್ದಾಗ ಬೆಂಕಿ ಕಾಣಿಸಿಕೊಂಡು ವ್ಯಾಪಿಸಿತು. ಸತಾರ ಪೊಲೀಸ್ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ 25ನೇ ಸಿಖ್ ಪದಾತಿದಳದ ಸೇನಾ ನಾಯಕ ಹವಿಲ್ದಾರ್ ಇಷಾರ್ ಸಿಂಗ್ ಪಾತ್ರ ನಿರ್ವಹಿಸುತ್ತಿದ್ದಾರೆ. ಸರಗ್ರಹಿ ಕದನ ಎಂದೇ ಭಾರತದ ಇತಿಹಾಸ ಪುಟಗಳಲ್ಲಿ ದಾಖಲಾದ ಈ ಯುದ್ದ 1897ರ ಸೆಪ್ಟೆಂಬರ್ನಲ್ಲಿ ನಡೆಯಿತು. ಇಶಾರ್ ಸಿಂಗ್ ನೇತೃತ್ವದ ಸೇನೆ ಅಫ್ಘಾನಿಸ್ತಾನದ ಆಕ್ರಮಣಕಾರರ ವಿರುದ್ಧ ಕೆಚ್ಚೆದೆಯಿಂದ ಸೆಣಸಿತ್ತು.

Sri Raghav

Admin