ಕೊಂಕಣಿ ಭಾಷೆಯಲ್ಲಿ ನಿರ್ಮಾಣವಾದ ಮೊದಲ ಮಕ್ಕಳ ಚಿತ್ರ ‘ಆವೈಜಾಸಾ’13ರಂದು ಪ್ರದರ್ಶನ

Spread the love

Konkani-Movie

ಬೆಂಗಳೂರು, ನ.10– ಕೊಂಕಣಿ ಭಾಷೆಯಲ್ಲಿ ನಿರ್ಮಿಸಿರುವ ಪ್ರಥಮ ಮಕ್ಕಳ ಚಿತ್ರ “ಆವೈಜಾಸಾ” ಇದೇ 13ರಂದು ನಗರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಡಾ.ಕೆ.ರಮೇಶ್‍ಕಾಮತ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಯಾಂಟಸಿ ಇಲ್ಲದೆ ನೈಜವಾಗಿ ನಿರ್ಮಿಸಿರುವ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಮಕ್ಕಳ ದಿನಾಚರಣೆಯ ಹಿಂದಿನ ದಿನ ಬೆಳಗ್ಗೆ 10 ಗಂಟೆಗೆ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಪ್ರದರ್ಶಿಸಲಾಗುತ್ತಿದೆ. ಈಗಾಗಲೇ ಅಮೆರಿಕಾದ ಅಟ್ಲಾಂಟ ಕೊಂಕಣಿ ಸಮ್ಮೇಳನದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿದೆ. ಈ ಮೊದಲು ಆಗಸ್ಟ್‍ನಲ್ಲಿ ಬಿಡುಗಡೆಯಾಗಿ ಜನಮನ್ನಣೆ ಪಡೆದಿದೆ ಎಂದು ಹೇಳಿದರು.

ನಾರ್ತ್ ಅಮೆರಿಕಾದ ಹೆಡ್ ಲೈನ್ ಇಂಟರ್‍ನ್ಯಾಷನಲ್ ಫಿಲಂ ಪೆಸ್ಟಿವಲ್‍ನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ, ರಾಜಸ್ತಾನದ ಜೈಪುರದಲ್ಲಿ ನಡೆದ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದಿದೆ ಎಂದು ತಿಳಿಸಿದರು. ಚಿತ್ರ ನಿರ್ಮಾಣಕ್ಕೆ ಕ್ರಿಸ್ಪ್ ಸಂಸ್ಥೆ ಈ ಚಿತ್ರ ನಿರ್ಮಾಣಕ್ಕೆ ಸಹಕಾರ ನೀಡಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕ್ರಿಸ್ಪ್ ಸಂಸ್ಥೆಯ ಅಧ್ಯಕ್ಷ ಕುಮಾರ್ ಜಾಗಿರ್‍ದಾರ್ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ವಿವರಣೆ ನೀಡಿದರು.

► Follow us on –  Facebook / Twitter  / Google+

Sri Raghav

Admin