ಕೊಳಗೇರಿ ಮಕ್ಕಳಿಗೆ ಪ್ರೇರಣೆಯಾದ ಮುಸ್ಕಾನ್
ಭೂಪಾಲ್,ಸೆ.10-ಕೊಳೆಗೇರಿ ಮಕ್ಕಳು ವಿದ್ಯಾಭಾಸದಿಂದ ವಂಚಿತವಾಗಿರುವ ಇಂದಿನ ದಿನಗಳಲ್ಲಿ ಕೊಳಗೇರಿಯ ಬಾಲಕಿಯೊಬ್ಬಳು ತನ್ನ ಮನೆಯಲ್ಲೇ ಚಿಕ್ಕ ಗ್ರಂಥಾಲಯವಿಟ್ಟುಕೊಂಡು ಮಕ್ಕಳಲ್ಲಿ ಓದುವ ಆಸಕ್ತಿ ಮೂಡಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಂಭತ್ತು ವರ್ಷದ ಮುಸ್ಕಾನ್ ಎಂಬ ವಿದ್ಯಾರ್ಥಿನಿ ತನ್ನ ಮನೆಯಲ್ಲಿ ಪುಟ್ಟ ಗ್ರಂಥಾಲಯವನ್ನಿಟ್ಟುಕೊಂಡಿದ್ದು, ಸುಮಾರು 121 ಪುಸ್ತಕಗಳನ್ನು ಸಂಗ್ರಹಿಸಿದ್ದಾಳೆ. ಮೂರನೇ ತರಗತಿ ಓದುತ್ತಿರುವ ಮುಸ್ಕಾನ್ ಗ್ರಂಥಾಲಯ ಇರುವುದು ಚಿಕ್ಕ ಸ್ಲಮ್ವೊಂದರಲ್ಲಿ. ಪ್ರತಿನಿತ್ಯ ಶಾಲೆ ಮುಗಿದ ಬಳಿಕ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಸುತ್ತಮುತ್ತಲಿನ ಮಕ್ಕಳಿಗೆ ನೀಡಿ ಓದುವಂತೆ ಪ್ರೇರೇಪಿಸುತ್ತಿದ್ದಾಳೆ. ಶಾಲಾ ವಿದ್ಯಾರ್ಥಿನಿಯ ಈ ಕಾರ್ಯಕ್ಕೆ ದೆಹಲಿಯ `ಎನ್ಐಟಿಆರ್ ಥಾಟ್ ಲೀಡರ್’ ಪುರಸ್ಕಾರ ನೀಡಲು ಮುಂದೆ ಬಂದಿದೆ.