ಕೊಳವೆ ಬಾವಿಗೆ ಬಿದ್ದಿದ್ದ ಇಬ್ಬರ ‘ದುರಂತ’ ಸಾವು

Spread the love

Borewell-Roana

ರೋಣ, ಏ.12– ಕೊಳವೆ ಬಾವಿ ರಿ ಬೋರ್ ಕೊರೆಸಲೆಂದು ಕೇಸಿಂಗ್ ಪೈಪ್ ಎತ್ತುತ್ತಿದ್ದ ಸಂದರ್ಭದಲ್ಲಿ ಇಬ್ಬರು 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ರೋಣ ತಾಲೂಕಿನ ಸನಡಿ ಗ್ರಾಮದಲ್ಲಿ ನಡೆದಿದೆ.  ಮಲ್ಲಪ್ಪ ಬಾನದ ಎಂಬುವರ ಹೊಲದಲ್ಲಿ ಬೋರ್‍ವೆಲ್ ನಲ್ಲಿ ನೀರು ಇಂಗಿಹೋಗಿದ್ದು, ರೀ ಬೋರ್ ಮಾಡಿಸಲೆಂದು ಮುಂದಾಗಿದ್ದ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಸನದಿ ಗ್ರಾಮದ ಬಸವರಾಜ್ ಪಟ್ಟಣಶೆಟ್ಟಿ (ಮೇಸ್ತ್ರಿ) (32), ಹೊಲದ ಮಾಲೀಕ ಶಂಕರಪ್ಪ ಬಾಣದ್ (30) ಬೋರ್‍ವೆಲ್‍ನೊಳಗೆ ಬಿದ್ದು, ಸಾವನ್ನಪ್ಪಿದ್ದಾರೆ.

Rona--Borewell-1

200 ಅಡಿ ಆಳದ ಬೋರ್‍ವೆಲ್‍ನಲ್ಲಿ ನೀರು ಬತ್ತಿಹೋಗಿದ್ದು, ಕಳೆದ 2 ದಿನಗಳಿಂದ ರೀ ಬೋರ್ ಕೊರೆಸುವ ಕೆಲಸ ಮಾಡುತ್ತಿದ್ದರು. ಕೇಸಿಂಗ್ ಪೈಪನ್ನು ಹೊರ ತೆಗೆಯುತ್ತಿದ್ದಾಗ ಮಣ್ಣು ಕುಸಿದು ಈ ಇಬ್ಬರು ಬೋರ್‍ವೆಲ್‍ನ 40 ಅಡಿ ಆಳದಲ್ಲಿ ಸಿಲುಕಿದ್ದಾರೆ. ಇವರನ್ನು ಹೊರತೆಗೆಯಲು ಅಗ್ನಿಶಾಮಕ ದಳ, ಪೊಲೀಸರು, ಜಿಲ್ಲಾಡಳಿತ ಹರಸಾಹಸಪಟ್ಟಿತಾದರೂ ಜೀವಂತವಾಗಿ ಹೊರತೆಗೆಯಲು ಸಾಧ್ಯವಾಗಲಿಲ್ಲ.   ಸುಮಾರು 40 ಅಡಿ ಆಳದಲ್ಲಿ ಸಿಲುಕಿದ್ದ ಇವರ ಮೇಲೆ ಮಣ್ಣು ಕುಸಿದಿದ್ದರಿಂದ ಇವರು ಮೃತಪಟ್ಟಿದ್ದಾರೆ. ಸತತ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆಯಲಾಗಿದೆ.

dhsgjffj

ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದ ಜನರು, ಸುತ್ತಮುತ್ತಲ ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಕುಟುಂಬದವರು ಮತ್ತು ಬಂಧು-ಬಳಗದ ರೋದನ ಮುಗಿಲುಮುಟ್ಟಿತ್ತು. ಸ್ಥಳದಲ್ಲೇ ಇದ್ದ ಆ್ಯಂಬುಲೆನ್ಸ್ ಮೂಲಕ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.   ರೋಣ ತಾಲೂಕಿನ ತಹಸೀಲ್ದಾರ್ ಅವರು ಅಂತ್ಯಸಂಸ್ಕಾರಕ್ಕೆ 5 ಸಾವಿರ, ತಾತ್ಕಾಲಿಕ ಪರಿಹಾರವಾಗಿ 20 ಸಾವಿರ ರೂ.ಗಳನ್ನು ಘೋಷಿಸಿದ್ದಾರೆ.   ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರು.  ಕೊಳವೆ ಬಾವಿಯಲ್ಲಿ ಸಿಲುಕಿದ್ದವರನ್ನು ಜೀವಂತ ಉಳಿಸಲು ಪ್ರಯತ್ನಿಸಿದರಾದರೂ ಫಲಸಿಗಲಿಲ್ಲ.

sdhgjhfdjj

ಸಂತಾಪ: ಕೊಳವೆ ಬಾವಿಯಲ್ಲಿ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ಘಟನಾ ಸ್ಥಳಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿತ್ತಾದರೂಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ. ಅತ್ಯಂತ ದುಃಖದ ವಿಷಯ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅಂತ್ಯಸಂಸ್ಕಾರಕ್ಕೆ ಅಗತ್ಯವಾದ ಎಲ್ಲಾ ನೆರವು ನೀಡಲಾಗುವುದು ಮತ್ತು ಜಿಲ್ಲಾಡಳಿತ ವತಿಯಿಂದ ಸೂಕ್ತ ಪರಿಹಾರ ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.

fhsghfjfj

sgfdhsdh

Sri Raghav

Admin