ಕೋಟೆನಾಡಲ್ಲೊಂದು ಪದ್ಮನಾಭನ ಭಂಡಾರ ಪತ್ತೆ …!

Spread the love
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಚಿತ್ರದುರ್ಗ, ಆ.12-ಕೋಟೆ ನಾಡಲ್ಲಿ ಒಂದು ಪದ್ಮನಾಭನ ಭಂಡಾರ ಇದೆಯಂತೆ. ಈ ಬಗ್ಗೆ ತಾನು ಕೇರಳದ ರಾಜ ರಾಜಮಾರ್ತಾಂಡ ವರ್ಮಾನ ಅವತಾರವೆಂದು ಹೇಳಿಕೊಳ್ಳುವ ತುಮಕೂರು ಜಿಲ್ಲೆ ಶಿರಾ ತಾಲೂಕು ಬುಕ್ಕಾ ಪಟ್ಟಣ ಹೋಬಳಿ ಮಾಳಿಗೆಹಟ್ಟಿ ಪ್ರದ್ಯುಮ್ನ ಯಾದವ್ ಎಂಬುವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಕಳೆದ 283 ವರ್ಷಗಳ ಹಿಂದೆ ನಾನು ರಾಜ ಮಾರ್ತಾಂಡ ವರ್ಮಾನಾಗಿದ್ದೆ. ಈಗ ಈ ಜನ್ಮದಲ್ಲಿ ಪ್ರದ್ಯುಮ್ನ ಯಾದವ್ ಆಗಿ ಜನ್ಮಿಸಿದ್ದೇನೆ ಎಂಬ ರಹಸ್ಯವನ್ನು ಸಾಕ್ಷಾತ್ ಅನಂತ ಪದ್ಮನಾಭನೇ ನನಗೆ ತಿಳಿಸಿದ್ದಾನೆ ಎಂದು ಹೇಳಿದರು.

ಕೇರಳದ ಅನಂತ ಪದ್ಮನಾಭನ ಇಚ್ಛೆಯಂತೆ ಕಳೆದ ಕೆಲವು ವರ್ಷಗಳಿಂದ ಅವರು ರಹಸ್ಯ ಕಾರ್ಯಾಚರಣೆ ನಡೆಸಿ ಚಿತ್ರದುರ್ಗದ ಬೆಟ್ಟದಲ್ಲಿರುವ ನಾಯಕರ ಅರಮನೆ ಪ್ರದೇಶದಲ್ಲಿ ಆರು ಕೋಣೆಗಳಲ್ಲಿ ಇರುವ ಅಪಾರ ಸಂಪತ್ತನ್ನು ಪತ್ತೆ ಹಚ್ಚಿದ್ದಾರಂತೆ. ಈಗ ಇದನ್ನು ಹೊರತೆಗೆಯಲು ಸರ್ಕಾರ ಸಹಕಾರ ನೀಡಬೇಕು ಮತ್ತು ಈ ಅಪಾರವಾದ ಸಂಪತ್ತನ್ನು ಜನರ ಕಲ್ಯಾಣಕ್ಕಾಗಿ ಬಳಸಬೇಕು ಎಂಬುದು ನನಗೆ ಅನಂತ ಪದ್ಮನಾಭ ಹಾಗೂ ರಾಜ ರಾಜಾಮಾರ್ತಾಂಡ ವರ್ಮಾರು ಸ್ವಪ್ನದಲ್ಲಿ ಬಂದು ತಿಳಿಸಿದ್ದಾರೆ ಎಂಬುದು ಪ್ರದ್ಯುಮ್ನ ಯಾದವ್ ಅವರ ಹೇಳಿಕೆ.

ಅನಂತ ಪದ್ಮನಾಭ ದೇವಾಲಯದಲ್ಲಿ ಪತ್ತೆಯಾದಂತೆ ಚಿತ್ರದುರ್ಗದಲ್ಲೂ ನಿಧಿ ಪತ್ತೆಯಾಗಿದೆ. ಅದನ್ನು ಸ್ವತಃ ನಾನೇ ಪತ್ತೆ ಹಚ್ಚಿದ್ದೇನೆ. ಇದು ಜನರದೇ ಸಂಪತ್ತು. ಹಾಗಾಗಿ ಇದನ್ನು ಜನರಿಗಾಗಿಯೇ ಬಳಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Facebook Comments

Sri Raghav

Admin