ಕೋರಮಂಡಲ್ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯ

Spread the love

kr--pete-4

ಕೆ.ಆರ್.ಪೇಟೆ, ಸೆ.1- ತಾಲೂಕಿನ ರೈತರ ಜೀವನಾಡಿಯಾಗಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ವಿರುದ್ದ ಚನ್ನೈ ಹಸಿರು ನ್ಯಾಯಾಧೀಕರಣ ಕೋರ್ಟಿನಲ್ಲಿ ಹಾಕಿರುವ ಕೇಸನ್ನು ವಾಪಸ್ ಪಡೆದು ಕಾರ್ಖಾನೆಯ ಆರಂಭಕ್ಕೆ ಅನುವು ಮಾಡಿಕೊಡಬೇಕು ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕೆ.ಎಂ.ಕುಮಾರ್ ಆಗ್ರಹಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಂಘದ ಅವರು, ಚನ್ನೈ ಹಸಿರುವ ನ್ಯಾಯಾಧೀಕರಣ ಪ್ರಾಧಿಕಾರ ಪೀಠಕ್ಕೆ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವಿಕೆಯಿಂದ ಪರಿಸರ ಹಾನಿಯಾಗುತ್ತಿದೆ ಹಾಗಾಗಿ ವಿದ್ಯುತ್ ಉತ್ಪಾದನಾ ಘಟಕ ಆರಂಭಕ್ಕೆ ಅನುಮತಿ ನೀಡಬಾರದು ಎಂದು ಪ್ರಕರಣ ದಾಖಲಿಸಿರುವುದು ಕಬ್ಬು ಬೆಳೆಯುವ ರೈತರು, ಕಾರ್ಮಿಕರು ಮತ್ತು ಕಾರ್ಖಾನೆಯ ಹಿತಕ್ಕೆ ದಕ್ಕೆ ತರುವಂತಹುದಾಗಿದೆ.

ಇದನ್ನು ವಜಾ ಮಾಡಬೇಕೆಂದು ಅದೇ ನ್ಯಾಯ ಪೀಠಕ್ಕೆ ವಾಸ್ತವಾಂಶವನ್ನು ಅರ್ಜಿಯ ಮೂಲಕ ತಿಳಿಸಿ ರೈತ ಸಂಘದ ಮುಖಂಡರಾದ ಎಂ.ಡಿ.ಯೋಗೇಶ್, ಕರೋಠಿ ತಮ್ಮಯ್ಯ ಅವರು ಹೂಡಿರುವ ತಕರಾರು ಅರ್ಜಿಯನ್ನು ವಜಾ ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಕಳೆದ 15ವರ್ಷಗಳಿಂದ ರೈತ ಸಂಘದಲ್ಲಿ ತಾಲೂಕು ಕಾರ್ಯದರ್ಶಿಯಾಗಿದ್ದ ದಿನದಿಂದಲೂ ಕಾರ್ಖಾನೆಯಲ್ಲಿ ಹೊರಗುತ್ತಿಗೆ ನೌಕರರ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ನನ್ನ ಜೀವನೋಪಾಯಕ್ಕಾಗಿ ಮಾಡುತ್ತಿದ್ದೇನೆ ಅಂದು ವಿರೋಧ ಪಡಿಸದೆ ಕಬ್ಬು ಬೆಳೆಗಾರರ ಸಂಘ ರಚಿಸಿದ ತಕ್ಷಣ ಏಕೆ ಈ ಆರೋಪ ಎಂದು ರೈತ ಸಂಘದ ಮುಖಂಡರನ್ನು ಪ್ರಶ್ನಿಸಿದರು. ತಾಲೂಕು ಕಬ್ಬು ಬೆಳೆಗಾರರ ಸಂಘದ ಗೌರವಾಧ್ಯಕ್ಷ ಉಪಾಧ್ಯಕ್ಷ ಸಣ್ಣನಿಂಗೇಗೌಡ, ಖಜಾಂಚಿ ಕಾಯಿ ಮಂಜೇಗೌಡ, ಪದಾಧಿಕಾರಿಗಳಾದ ವಡಕಹಳ್ಳಿ ಮಂಜು, ಸುರೇಶ್, ಕೃಷ್ಣೇಗೌಡ, ದೇವರಾಜ್, ಅಕ್ಕಿಹೆಬ್ಬಾಳು ರಾಜಾನಾಯಕ್ ಮತ್ತಿತರರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Sri Raghav

Admin