ಕೋರ್ಟ್ಗೆ ಕರೆದೊಯ್ಯುವಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಎಸ್ಕೇಪ್
ಗದಗ,ಆ.25- ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಲು ಕರೆತರುತ್ತಿದ್ದ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಹರ್ಲಾಪುರ ಬಳಿ ಇಂದು ನಡೆದಿದೆ. ಕಳ್ಳತನ ಆರೋಪಿಯಾದ ಸತೀಶ್ ಚೌಹಾಣ್ನನ್ನು ಕೋರ್ಟ್ಗೆ ಹಾಜರುಪಡಿಸಲು ಬೆಳಗಾವಿಯ ಹಿಂಡಲಗ ಜೈಲಿನಿಂದ ಕೊಪ್ಪಳಕ್ಕೆ ಕರೆತರಲಾಗುತ್ತಿತ್ತು. ಕಳ್ಳತನ ಆರೋಪ ಪ್ರಕರಣ ದಾಖಲಿಸಿಕೊಂಡಿರುವ ಕೊಪ್ಪಳ ಠಾಣೆ ಪೊಲೀಸರು ಆರೋಪಿಯನ್ನು ಕರೆತರುವ ವೇಳೆ ಹರ್ಲಾಪುರ ಬಳಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಎಸ್ಕೇಪ್ ಆಗಿರುವ ಆರೋಪಿ ಸತೀಶ್ ಚೌಹಾಣ್ಗಾಗಿ ಹುಡುಕಾಟ ನಡೆಸಲಾಗಿದೆ.