ಕೌಶಲ್ಯತರಬೇತಿಗೆ ನೋಂದಣಿ ಹಾಗೂ ವೆಬ್ ಪೋರ್ಟನ್  ಚಾಲನೆ

GOWRIBIDANURU

ಗೌರಿಬಿದನೂರು, ಮೇ 17-ನಿರುದ್ಯೋಗ ದೇಶದ ಪ್ರಧಾನ ಸಮಸ್ಯೆಯಾಗಿದ್ದು, ಇದನ್ನು ನಿವಾರಿಸಲು ಆಳುವ ಸರಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ನಿರುದ್ಯೋಗ ಸಮಸ್ಯೆ ನೀಗಿಸಿ ಆರ್ಥಿಕ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಉಪಸಭಾ ಅಧ್ಯಕ್ಷ ಎನ್.ಹೆಚ್.ಶಿವಶಂಕರರೆಡ್ಡಿ ಹೇಳಿದರು. ಪಟ್ಟಣದ ಸಾಮಥ್ರ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ಸರಕಾರದ ಮಹತ್ವ ಯೋಜನೆ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನೋಪಾಯ ಇಲಾಖೆ ವತಿಯಿಂದ ಯುವಜನತೆಗೆ ಅಗತ್ಯ ತರಬೇತಿ ನೀಡಲು ಮುಂದಾಗಿದ್ದು ಅದರಡಿಯಲ್ಲಿ ಕೌಶಲ್ಯತರಬೇತಿ ನೀಡಲು 2017 -2018ನೇ ಸಾಲಿನಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರ ಬಳಕೆಗಾಗಿ ಮೊಬೈಲ್ ಆ್ಯಪ್ ಅನ್ನು ಅಭಿವೃದಿಗೊಳಿಸುತ್ತಿದೆ. ನಿರುದ್ಯೋಗಿ ವಿದ್ಯಾರ್ಥಿಗಳು ವೆಬ್ ಪೋರ್ಟನ್  ಮತ್ತು ಮೊಬೈಲ್‍ಆಪ್ ಸಹಾಯದೊಂದಿಗೆ ಅರ್ಜಿಗಳನ್ನು ನೀಡಬಹುದಾಗಿದೆ.ಇದಕ್ಕೆ ತಹಸೀಲ್ದಾರ್ ನೂಡಲ್‍ಅಧಿಕಾರಿಯಾಗಿದ್ದು ಹತ್ತು ದಿವಸಗಳ ಅವಧಿಯಲ್ಲಿಅರ್ಜಿ ಸಲ್ಲಿಸುವ ಪ್ರ್ಕತಿಯೆ ಮುಕ್ತಾಯಗೊಳ್ಳುತ್ತದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಬೇಡಿಕೆಗನುಸಾರವಾಗಿ ಪಾಲಿಟೆಕ್ನಿಕ್‍ಕಾಲೇಜು ಪ್ರಾರಂಭ ಮಾಡಲಾಗುವುದುಎಂದು ತಿಳಿಸಿದರು.ಕೈಗಾರಿಕಾ ಪ್ರಾಂಗಣದಲ್ಲೇ ಜಿಟಿಟಿಸಿ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದ್ದು, ವಿವಿಧ ತಾಂತ್ರಿಕ ಕೌಶಲ್ಯಗಳ ತರಬೇತಿ ನೀಡಿ ಪ್ರಾಂಗಣದಲ್ಲಿ ಕಾರ್ಖಾನಿಗಳಲ್ಲೇ ಉದ್ಯೋಗವಕಾಶವನ್ನು ಕಲ್ಪಿಸಲಾಗುವುದು ಇದರಿಂದ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ತಹಸೀಲ್ದಾರ್ ಎಂ.ನಾಗರಾಜ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ,ಡಾ. ನಾರಾಯಣ ಸ್ವಾಮಿ ,ಜಿ.ಪಂ ಸದಸ್ಯರಾದ ಹೆಚ್ ವಿ ಮಂಜುನಾಥ್, ಡಿ.ನರಸಿಂಹಮೂರ್ತಿ, ಪ್ರಮೀಲಾ ಪ್ರಕಾಶ್‍ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಅಬ್ದುಲ್ಲಾ ಸಿಡಿಪಿಒ ರಾಜೇಂದ್ರ ಪ್ರಸಾದ್, ಐಟಿಐ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin