ಕ್ಯಾನ್ಸರ್ ರೋಗಿಗಳಿಗೊಂದು ಖುಷಿ ಸುದ್ದಿ , ಕಿದ್ವಾಯಿ ಆಸ್ಪತ್ರೆಯಲ್ಲೀಗ 4 ರೇಡಿಯೋ ಥೆರಪಿ ಯಂತ್ರ

Kidwai--01

ಬೆಂಗಳೂರು, ಜೂ.3- ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯಲ್ಲಿ 4 ರೆಡಿಯೊ ಥೆರಪಿ ಯಂತ್ರಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದ್ದು, ಇದು ಪೂರ್ಣಗೊಂಡ ನಂತರ ಕ್ಯಾನ್ಸರ್ ರೋಗಿಗಳಿಗೆ ಕಾಯುವಿಕೆ ಅವಧಿ 3ರಿಂದ 4 ವಾರಗಳಿಗೆ ಬದಲಾಗಿ ಒಂದು ವಾರಕ್ಕೆ ಇಳಿಯಲಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 120 ಕೋಟಿ ವೆಚ್ಚದ ಸ್ಟೇಟ್ ಕ್ಯಾನ್ಸರ್ ಇನ್ಸಿಟಿಟ್ಯೂಟ್‍ಅನ್ನು ವರ್ಷಾಂತ್ಯಕ್ಕೆ ನರೇಂದ್ರ ಮೋದಿ ಉದ್ಘಾಟಲಿದ್ದಾರೆ. ಇತ್ತೀಚೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಡಿಗಲ್ಲು ಹಾಕಿದ್ದರು. ಇದರಲ್ಲಿ 4 ರೆಡಿಯೊ ಥೆರಪಿ ಯಂತ್ರಗಳನ್ನು ಅಳವಡಿಸಲಾಗುತ್ತಿದೆ.ಕಿದ್ವಾಯಿ ಆಸ್ಪತ್ರೆಗೆ ವರ್ಷಕ್ಕೆ 18 ಸಾವಿರ ಹೊಸ ರೋಗಿಗಳು ಬರುತ್ತಾರೆ. 3 ಲಕ್ಷ ಹಳೆ ರೋಗಿಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಶೇ.30ರಷ್ಟು ಹೊಸ ರಾಜ್ಯದವರಾಗಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಾದ್ದರಿಂದ ರೆಡಿಯೊ ಥೆರಪಿಗಾಗಿ ರೋಗಿಗಳು 3ರಿಂದ 4 ವಾರ ಕಾಯಬೇಕಾಗಿತ್ತು. ಹೊಸ ಯಂತ್ರ ಅಳವಡಿಕೆಯಿಂದ ಈ ಕಾಲಾವಧಿ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದರು.  ಆಟೋಮೆಟಿಕ್ ಎನರ್ಜಿ ಬೋರ್ಡ್ ಅನುಮತಿ ಬೇಕಿದೆ. ಈ ಬೋರ್ಡ್‍ನವರು ರೆಡಿಯೊ ಥೆರಪಿ ಕೇಂದ್ರದ ಸಿಬ್ಬಂದಿ ತಂತ್ರಜ್ಞಾನ ಸಂಸ್ಥೆ ಗುಣಮಟ್ಟದ ಅಧ್ಯಯನ ನಡೆಸಿ ದೃಢೀಕರಣ ಪತ್ರ ನೀಡುತ್ತದೆ.

ಕಿದ್ವಾಯಿ ಆಸ್ಪತ್ರೆಗೆ ಬಹಳಷ್ಟು ವೈದ್ಯರು, ನರ್ಸ್, ಪ್ಯಾರಾ ಮೆಡಿಕಲ್ ಸಿಬ್ಬಂದಿ ಕೊರತೆ ಇದೆ. ನಾಲ್ಕು ರೆಡಿಯೊ ಥೆರಪಿ ಕೇಂದ್ರಗಳಿಗೆ 61 ಹುದ್ದೆಗಳಿಗೆ ಭರ್ತಿ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದರ ಜತೆಗೆ 100 ವೈದ್ಯರು, 200 ನರ್ಸ್‍ಗಳು ಸೇರಿದಂತೆ ತಾಂತ್ರಿಕ ಸಿಬ್ಬಂದಿ ಅಗತ್ಯವಿದೆ. ಇವರನ್ನು ಭರ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು, ಕಳೆದ ಎರಡೂ ವರ್ಷಗಳ ಹಿಂದೆ ತಾವು ನಿರ್ದೇಶಕರಾದ ನಂತರ ಹಲವು ಹಂತದ ಸಿಬ್ಬಂದಿಗೆ ಭರ್ತಿ ನೀಡಲಾಗಿದೆ. 25 ವರ್ಷಗಳಿಂದ ನಡೆಯದ ನೇಮಕಾತಿಗೆ ಚಾಲನೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಗುಣಮಟ್ಟ ಉತ್ತಮವಾಗಿದ್ದು, ದೇಶ-ವಿದೇಶಗಳ ಗಮನ ಸೆಳೆದಿದೆ ಎಂದು ಹೇಳಿದರು.ಕ್ಯಾನ್ಸರ್ ಪತ್ತೆಹಚ್ಚುವುದು ಬಹಳ ಕಷ್ಟದ ಕೆಲಸ. ಅದನ್ನು ಪತ್ತೆಹಚ್ಚದ ಹೊರತು ಚಿಕಿತ್ಸೆ ನೀಡಲಾಗದು. ಬಹಳಷ್ಟು ರೋಗಿಗಳು ಆಸ್ಪತ್ರೆಗೆ ಬಂದ ತಕ್ಷಣ ಚಿಕಿತ್ಸೆ ಆರಂಭಿಸಬೇಕೆಂದು ಬಯಸುತ್ತಾರೆ. ಹೀಗಾಗಿ ಚಿಕಿತ್ಸೆ ವಿಳಂಬವಾಗುತ್ತಿದೆ ಎಂಬ ಮನೋಭಾವ ಬೆಳೆದಿದೆ. ವಾಸ್ತವದಲ್ಲಿ ಸರಿಯಾಗಿ ತಪಾಸಣೆ ಮಾಡದೆ ಚಿಕಿತ್ಸೆ ಆರಂಭಿಸುವುದಿಲ್ಲ. ಇದೊಂದು ಗುಣಮುಖುವಾಗುವಂತಹ ಕಾಯಿಲೆ. ಆದರೆ, ಶೀಘ್ರ ಪತ್ತೆ ಕ್ಯಾನ್ಸರ್ ನಾಪತ್ತೆ ಎಂಬ ಘೋಷವಾಕ್ಯದೊಂದಿಗೆ ಕಿದ್ವಾಯಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಬಹಳಷ್ಟು ರೋಗಿಗಳು ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿದ ನಂತರ ಚಿಕಿತ್ಸೆಗೆ ಬರುತ್ತಾರೆ. ಮೊದಲನೇ ಅಥವಾ ಎರಡನೇ ಹಂತದಲ್ಲಿ ಆಸ್ಪತ್ರೆಗೆ ಬಂದರೆ ಚಿಕಿತ್ಸೆ ನೀಡಿ ಗುಣಮುಖವಾಗಿಸಲು ಸಾಧ್ಯ. ಮೂರು ಅಥವಾ ನಾಲ್ಕನೇ ಹಂತದಲ್ಲಿ ಬಂದವರಿಗೆ ಉಪಶಮನಕಾರಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ರಾಜ್ಯದಲ್ಲಿ 6 ಕಡೆ ನಮ್ಮ ಶಾಖೆಗಳಿವೆ. ಗುಲ್ಬರ್ಗದಲ್ಲೂ ಬೆಂಗಳೂರಿನಷ್ಟೇ ಸೌಲಭ್ಯ ಒದಗಿಸಲಾಗಿದೆ. ಕಿದ್ವಾಯಿಯಲ್ಲಿ ಉತ್ತಮ ಉಪಶಮನಕಾರಿ ಚಿಕಿತ್ಸೆ ನೀಡಲಾಗುತ್ತದೆ ಎಂಬ ಕಾರಣಕ್ಕೆ ಸ್ಪೇನ್ ದೇಶದ ಯೂರೋಪಿಯನ್ ಜನರಲ್ ಆಫ್ ಪಾಲಿಟೀವ್ ಕೇರ್ ಪ್ರಶಸ್ತಿಯನ್ನು ನಮಗೆ ನೀಡಲಾಗಿದೆ. ಈವರೆಗೂ ಈ ಪ್ರಶಸ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಮಂದಿಗೆ ತೊರೆತಿದೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin