ಕ್ಯಾನ್ಸರ್ ರೋಗಿಗೆ ಸಹಾಯ ಹಸ್ತ ಚಾಚಿದ ಸಂಸದ ಪ್ರತಾಪ್ಸಿಂಹ
ಮೈಸೂರು, ಜು.7-ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ವೆಚ್ಚವನ್ನು ಸಂಸದ ಪ್ರತಾಪ್ಸಿಂಹ ಅವರು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ನಗರದ ಗೋಕುಲಂನ ನಿವಾಸಿ ನಾಗೇಗೌಡ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಇವರು ಸಂಕಷ್ಟದಲ್ಲಿದ್ದು, ಆಸ್ಪತ್ರೆಯ ಬಿಲ್ ಪಾವತಿಸಲಾಗದೆ ಕುಟುಂಬ ಕಂಗಾಲಾಗಿತ್ತು.
ಸಂಬಂಧಿಕರ ಸಲಹೆ ಮೇರೆಗೆ ಸಂಸದರನ್ನು ಭೇಟಿ ಮಾಡಿ ಸಹಾಯ ಕೋರಿದಾಗ ಸಂಸದರು ಇದಕ್ಕೆ ಸ್ಪಂದಿಸಿ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ರೋಗಿಯ ಚಿಕಿತ್ಸಾ ವೆಚ್ಚಕ್ಕಾಗಿ 95.125 ರೂ. ಬಿಡುಗಡೆ ಮಾಡಿ ಧನಸಹಾಯ ಮಾಡಿ ಆದಷ್ಟು ಬೇಗ ಗುಣಮುಖರಾಗಲೆಂದು ಹಾರೈಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >