ಕ್ಯಾಪ್ಟನ್ ಅಮರಿಂದರ್ ಸಿಂಗ್‍ಗೆ ಟ್ರಿಪಲ್ ಖುಷಿ…!

Amareendar-Singh

ಪಟಿಯಾಲಾ, ಮಾ.11-ಮಾಜಿ ಮುಖ್ಯಮಂತ್ರಿ ಮತ್ತು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಈ ದಿನ ಟ್ರಿಪಲ್ ಖುಷಿಯ ಸಂಭ್ರಮ. ಇಂದು ಅವರ 75ನೇ ಜನ್ಮದಿನ. ಒಂದೆಡೆ ಹುಟ್ಟುಹಬ್ಬದ ಖುಷಿಯಾದರೆ ಇನ್ನೊಂದೆಡೆ ಪಟಿಯಾಲಾ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಮತ್ತೊಂದೆಡೆ ಮತ್ತೆ ಪಂಜಾಬ್ ಮುಖ್ಯಮಂತ್ರಿಯಾಗಲಿದ್ದಾರೆ.   ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಪಕ್ಷವು ಕ್ಯಾ. ಸಿಂಗ್ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಪಟಿಯಾಲ ರಾಜಮನೆತನದ ಕುಡಿಯಾದ ಅವರು ದೀರ್ಘಕಾಲ ಜೀವಿಸಿರುವ ರಾಜವಂಸಸ್ಥ ಎಂಬ ಹೆಗ್ಗಳಿಕೆಯೂ ಇದೆ. ಮೋತಿಭಾಗ್ ಪ್ಯಾಲೇಸ್‍ನಲ್ಲಿ ಬೆಳಗ್ಗೆಯಿಂದಲೇ ಸಂಭ್ರಮದ ವಾತಾವರಣ ನೆಲೆಸಿದೆ. ಪಂಜಾಬ್‍ನಲ್ಲಿ ಗೆಲುವು ಸಾಧಿಸುವ ಮೂಲಕ 126 ವರ್ಷಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷ ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮಾನ ಉಳಿಸಿಕೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin