ಕ್ರೀಡಾ ಜಗತ್ತಿನ ಮಹಾಹಬ್ಬ ಒಲಿಂಪಿಕ್ಸ್‍ಗೆ ಕ್ಷಣಗಣನೆ

Spread the love

adGFSDGDGರಿಯೋ ಡಿ ಜನೈರೋ, ಆ.5– ಕ್ರೀಡಾ ಜಗತ್ತಿನ ಮಹೋನ್ನತ ಹಬ್ಬ ರಿಯೋ ಒಲಿಂಪಿಕ್ಸ್‍ಗೆ ಕ್ಷಣಗಣನೆ ಆರಂಭವಾಗಿದ್ದು, ಅಭೂತಪೂರ್ವ ಬಂದೋಬಸ್ತ್‍ನೊಂದಿಗೆ ಸಾಂಬಾನಾಡು ಬ್ರೆಜಿಲ್‍ನ ಮೋಹಕ ನಗರಿ ರಿಯೋ-ಡಿ-ಜನೈರೋ ಸಕಲ ರೀತಿಯಲ್ಲಿ ಸಜ್ಜಾಗಿದೆ.  ಇಂದು ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ ಶನಿವಾರ ಮುಂಜಾನೆ 4.30) ಒಲಿಂಪಿಕ್ಸ್ ಕ್ರೀಡಾಕೂಟ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ಸಾಂಬಾನಾಡಿನಲ್ಲಿ ನಡೆಯಲಿರುವ ಕ್ರೀಡಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಕಾತುರದಿಂದ ಕಾಯುತ್ತಿದೆ.   ದೇವೇಂದ್ರದ ಅಮರಾವತಿವಂತೆ ಕಂಗೊಳಿಸುತ್ತಿರುವ ರಿಯೋ ನಗರದಲ್ಲಿ ಉದ್ಘಾಟನೆ ಸಮಾರಂಭವು ಲಕ್ಷಾಂತರ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ. ಉದ್ಘಾಟನಾ ಸಮಾರಂಭದ ಮೆರವಣಿಗೆಯಲ್ಲಿ ಭಾರತ 95ನೇ ಸಾಲಿನಲ್ಲಿದ್ದು, ತ್ರಿವರ್ಣ ಧ್ವಜದಾರಿ ಅಭಿನವ ಬಿಂದ್ರಾ ಪಥಸಂಚಲನದಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.

ಈ ಕ್ರೀಡಾ ಮಹಾಹಬ್ಬ ಆ.5 ರಿಂದ 21ರವರೆಗೆ ನಡೆಯಲಿದ್ದು, ಒಟ್ಟು 206 ದೇಶಗಳು ಪ್ರತಿನಿಧಿಸುತ್ತಿವೆ. ರಿಯೋ ಒಲಿಂಪಿಕ್ಸ್‍ನಲ್ಲಿ 28 ಕ್ರೀಡೆಗಳು ಜರುಗಲಿದ್ದು, ಒಟ್ಟು 11,239 ಸ್ಪರ್ಧಿಗಳು ಪದಕಗಳಿಗಾಗಿ ತೀವ್ರ ಪೈಪೆÇೀಟಿ ನಡೆಸಲಿದ್ದಾರೆ. ಭಾರತದಿಂದ ಒಟ್ಟು 119 ಕ್ರೀಡಾಪಟುಗಳು ತಮ್ಮ ಶಕ್ತಿ-ಸಾಮಥ್ರ್ಯವನ್ನು ಪಣಕ್ಕೊಡಲು ಕಾತುರರಾಗಿದ್ದಾರೆ.   ಹಲವಾರು ಪ್ರಥಮಗಳನ್ನು ಒಳಗೊಂಡಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆರಂಭದಿಂದ ಮುಕ್ತಾಯದವರೆಗೆ ಒಂದು ಕೋಟಿಗೂ ಹೆಚ್ಚು ಮಂದಿ ಪ್ರವಾಸಿಗರು ಮತ್ತು ಕ್ರೀಡಾಭಿಮಾನಿಗಳು ಭೇಟಿ ನೀಡುವ ನಿರೀಕ್ಷೆ ಇದೆ. ಈಗಾಗಲೇ ಜಗತ್ತಿನ ದಶದಿಕ್ಕುಗಳಿಂದ ಲಕ್ಷಾಂತರ ಮಂದಿ ತಂಡೋಪತಂಡವಾಗಿ ರಿಯೋಗೆ ಧಾವಿಸಿದ್ದಾರೆ.

ಕಾಫಿ ನಾಡು ಬ್ರೆಜಿಲ್‍ನ ಸಾಂಪ್ರದಾುಕ ಸಾಂಬಾ ನೃತ್ಯ ಸೇರಿದಂತೆ ಧ ದೇಶಗಳ ಸಂಸ್ಕøತಿ-ಪರಂಪರೆಗಳು ಪಥಸಂಚಲನಲ್ಲಿ ಅನಾವರಣಗೊಳ್ಳಲಿದ್ದು, ಪ್ರೇಕ್ಷಕರಿಗೆ ಮನರಂಜನೆಯ ಪುಳಕ ನೀಡಲಿದೆ.  ಯುರೋಪ್ ಸೇರಿದಂತೆ ವಿವಿಧ ದೇಶಗಳಲ್ಲಿ ಇತ್ತೀಚೆಗೆ ಭಯೋತ್ಪಾದಕರ ಆಕ್ರಮಣ ಪ್ರಕರಣಗಳು ಮತ್ತು ಹಿಂಸಾಚಾರ ತೀವ್ರ ಹೆಚ್ಚಾಗಿರುವ  ಹಿನ್ನೆಲೆಯಲ್ಲಿ ರಿಯೋ ಸೇರಿದಂತೆ ಒಲಿಂಪಿಕ್ ಕ್ರೀಡಾಕೂಟ ನಡೆಯುವ ಬ್ರೆಜಿಲ್‍ನ ಐದು ಮಹಾನಗರಗಳಲ್ಲಿ ಇಂದೆಂದೂ ಕಂಡು ಕೇಳರಿಯದಂಥ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin