ಕ್ರೆಡಿಟ್ ಕಾರ್ಡ್ ವಂಚನೆ ಜಾಲ : 16 ಭಾರತೀಯರ ವಿರುದ್ಧ ಆರೋಪ ದಾಖಲು

Fraud--012

ನ್ಯೂಯಾರ್ಕ್,ಮಾ.10-ಕ್ರೆಡಿಟ್‍ಕಾರ್ಡ್ ವ್ಯಾಪಕ ಕಳ್ಳತನ ಮತ್ತು ವಂಚನೆ ಮೂಲಕ ವ್ಯಕ್ತಿಗಳು ಮತ್ತು ಹಣಕಾಸು ಸಂಸ್ಥೆಗಳಿಗೆ 3.5 ದಶಲಕ್ಷ ಡಾಲರ್ ನಷ್ಟ ಉಂಟು ಮಾಡಿದ್ದ ವ್ಯವಸ್ಥಿತ ಜಾಲದ ಓರ್ವ ಮಹಿಳೆ ಸೇರಿದಂತೆ 16 ಭಾರತೀಯರ ವಿರುದ್ಧ ಅಮೆರಿಕ ಪೊಲೀಸರು ಆರೋಪಪಟ್ಟಿ ದಾಖಲಿಸಿಕೊಂಡಿದ್ದಾರೆ.   ನ್ಯೂಯಾರ್ಕ್‍ನ ಕ್ವೀನ್ಸ್ ನಿವಾಸಿ ಮೊಹಮ್ಮದ್ ರಾಣ(40) ಈ ವ್ಯವಸ್ಥಿತ ವಂಚನೆ ಜಾಲದ ಸೂತ್ರಧಾರ. ತನ್ನ ಬಲಗೈ ಬಂಟ ಇಂದ್ರಜಿತ್ ಸಿಂಗ್(24) ಮೂಲಕ ಅಮೆರಿಕನ್ನರ ಕ್ರೆಡಿಟ್‍ಕಾರ್ಡ್‍ಗಳು ಮತ್ತು ಗುರುತು ಪತ್ರಗಳನ್ನು ಕಳವು ಮಾಡಿ ಭಾರೀ ಹಣವನ್ನು ವಂಚಿಸಿದ್ದರು.

ಈ ವ್ಯವಸ್ಥಿತ ವಂಚನೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅಮೆರಿಕ ಪೊಲೀಸರು ಈವರೆಗೆ ಭಾರತೀಯ ಮೂಲದ 30 ಮಂದಿ ವಿರುದ್ದ ವಿವಿಧ ಆರೋಪಗಳ ಸಂಬಂಧ ದೋಷಾರೋಪಗಳನ್ನು ದಾಖಲಿಸಿಕೊಂಡಿದ್ದಾರೆ.   ಈ ಆರೋಪಿಗಳು ಕದ್ದ ಕ್ರೆಡಿಟ್ ಕಾರ್ಡ್‍ಗಳನ್ನ ಬಳಸಿ ಅಮೆರಿಕದ ದೊಡ್ಡ ದೊಡ್ಡ ಮಳಿಗೆಗಳಲ್ಲಿ ಅತ್ಯಂತ ದುಬಾರಿ ವಸ್ತುಗಳನ್ನು ಖರೀದಿಸಿ ನಕಲಿ ಗುರುತುಗಳನ್ನು ನೀಡಿ ವಂಚಿಸಿದ್ದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಜಾಲದಲ್ಲಿ ಮತ್ತಷ್ಟು ಮಂದಿ ಸಾಧ್ಯತೆಯಿದ್ದು, ಇದು ಭಾರತದಲ್ಲೂ ವಿಸ್ತರಿಸಬಹುದಾದ ಸಾಧ್ಯತೆಗಳ ಬಗ್ಗೆ ತನಿಖೆ ಚುರುಕುಗೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Sri Raghav

Admin