ಖಂಡಾಂತರ ಕ್ಷಿಪಣಿ ಉಡಾವಣೆ ಯಶಸ್ವಿ : ಖಚಿತಪಡಿಸಿದ ಉತ್ತರ ಕೊರಿಯಾ

North-Korea--01

ಸಿಯೋಲ್, ಮೇ 22-ಮಧ್ಯಮ ಶ್ರೇಣಿಯ ಖಂಡಾಂತರ ಕ್ಷಿಪಣಿಯ ಯಶಸ್ವಿ ಉಡಾವಣೆಯನ್ನು ಉತ್ತರ ಕೊರಿಯಾ ಇಂದು ಖಚಿತಪಡಿಸುವ ಮೂಲಕ ಮತ್ತೊಮ್ಮೆ ಅಮೆರಿಕ ಸೇರಿದಂತೆ ವೈರಿ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ.  ಪ್ರಕ್ಷೇಪಕ ಕ್ಷಿಪಣಿ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ. ಸೇನಾ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲು ಈಗ ಈ ಶಸ್ತ್ರಾಸ್ತ್ರ ಸಿದ್ಧವಾಗಿದೆ ಎಂದು ಪಯೊಂಗ್‍ಯಾಂಗ್‍ನ ಸರ್ಕಾರಿ ಒಡೆತನದ ಮಾಧ್ಯಮ ವರದಿ ಮಾಡಿದೆ. ಕ್ಷಿಪಣಿ ಉಡಾವಣೆ ಪರೀಕ್ಷೆಯನ್ನು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ -ಉನ್ ಖುದ್ದಾಗಿ ವೀಕ್ಷಿಸಿದರು.ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಚ್ಚರಿಕೆ ನಡುವೆಯೂ ಮತ್ತೆ ಕೊರಿಯಾ ಮಾರಕ ಕ್ಷಿಪಣಿ ಪರೀಕ್ಷೆ ನಡೆಸಿರುವುದು ಅಂತಾರಾಷ್ಟ್ರೀಯ ಖಂಡನೆಗೆ ಎಡೆ ಮಾಡಿಕೊಟ್ಟಿದ್ದು, ಆ ದೇಶದ ಮೇಲೆ ದಿಗ್ಬಂಧನ ಹೇರುವ ಸಾಧ್ಯತೆಗಳು ಮತ್ತಷ್ಟು ದಟ್ಟವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin