ಖಾಯಂ ಆಗಿ ಫುಟ್‍ಪಾತ್ ವ್ಯಾಪಾರ ರದ್ದು

channapatanna

ಚನ್ನಪಟ್ಟಣ, ಫೆ.22- ಸಾರ್ವಜನಿಕರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸ್ವಚ್ಛತಾ ಸಮಸ್ಯೆ, ಭ್ರಷ್ಟಾಚಾರ ಹತ್ತಿಕ್ಕಲು ಆಡಳಿತದಲ್ಲಿ ಸಮಗ್ರ ಸುಧಾರಣೆ, ಖಾಯಂ ಆಗಿ ಫುಟ್‍ಪಾತ್ ವ್ಯಾಪಾರ ರದ್ದು, ಪ್ಲಾಸ್ಟಿಕ್ ನಿಷೇಧ, ತ್ಯಾಜ್ಯ ವಿಲೇವಾರಿ ಘಟಕದ ಸ್ಥಾಪನೆ ಬಗ್ಗೆ ಗಂಭೀರವಾಗಿ ಗಮನ ಹರಿಸದಿರುವ ಇಲ್ಲಿನ ನಗರಸಭೆ 2017-18ರ ಸಾಲಿಗೆ 310.53 ಲಕ್ಷ ರೂಪಾಯಿಗಳ ಉಳಿತಾಯದ ಬಜೆಟ್ ಮಂಡಿಸಲಾಗಿದೆ.ಬಜೆಟ್ ಸಭೆಯಲ್ಲಿ ನೂತನ ಸಾಲಿನ ಬಜೆಟ್ ಮಂಡಿಸಿದ ನಗರಸಭಾಧ್ಯಕ್ಷೆ ನಜ್ಮುನ್ನೀಸಾ, ಅಧಿಕಾರಿಗಳು ಕೈಗಿತ್ತ ಅಂಕಿ-ಅಂಶಗಳನ್ನೇ ಬಜೆಟ್‍ನಲ್ಲಿ ಪ್ರಸ್ತಾಪಿಸಿ ತಮ್ಮ ಅಪ್ರಬುದ್ಧತೆ ತೋರಿಸಿಕೊಂಡಿದ್ದಾರೆ.ಬಜೆಟ್ ಪ್ರಕಾರ 1566.30 ಲಕ್ಷ ರೂ.ಗಳ ರಾಜಸ್ವ ಸ್ವೀಕೃತಿ, 1404.75 ಲಕ್ಷ ರೂ.ಗಳ ಪಾವತಿ ಅಂದಾಜಿಸಲಾಗಿದ್ದು, 575 ಲಕ್ಷ ರೂ. ಬಂಡವಾಳ ಸ್ವೀಕೃತಿಯ ಗುರಿ ಹೊಂದಿದ್ದರೆ, 15,84,080 ಲಕ್ಷ ರೂ.ಗಳು ಬಂಡವಾಳ ಪಾವತಿಗೆ ವ್ಯಯವಾಗಲಿದ್ದು, ಇಲ್ಲಿ 1009.80ಲಕ್ಷ ರೂ.ಗಳು ಬಂಡವಾಳ ಪಾವತಿಗೆ ವ್ಯಯವಾಗಲಿದ್ದು, ಇಲ್ಲಿ 1009.80 ಲಕ್ಷ ರೂ. ಕೊರತೆ ಎದುರಾಗಲಿದೆ.

ಅಸಾಧಾರಣ ಖಾತೆಯಲ್ಲಿ 547.09 ಲಕ್ಷ ರೂ.ಗಳ ಸ್ವೀಕೃತಿಯ ಗುರಿ ಇದ್ದರೆ, ಇಲ್ಲಿ ಪಾವತಿಯ ಮೊತ್ತವೇ ಅದನ್ನು ಮೀರಿ 687.25 ಲಕ್ಷ ರೂ.ಗಳಾಗಲಿದ್ದು, ಈ ಮೂರು ಮೂಲಗಳಿಂದಲೇ ನಗರಸಭೆಗೆ 988.41 ಲಕ್ಷ ರೂ.ಗಳ ಕೊರತೆಯನ್ನು ನಗರಸಭೆ ಎದುರಿಸಲಿದೆ. ಆದರೂ ನಗರಸಭಾಡಳಿತ 310.53 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿ ಅಚ್ಚರಿಗೊಳಿಸಿದೆ.ಪ್ರಸಕ್ತ ಸಾಲಿನಲ್ಲಿ ನಗರಾಡಳಿತ 1936.89 ಲಕ್ಷ ರೂ.ಗಳ ಆದಾಯದ ನಿರೀಕ್ಷೆ ಹೊಂದಿದ್ದು, ರಾಜಸ್ವ ಪಾವತಿಯೇ 1479.25 ರೂ.ಗಳಾಗಲಿದೆ. ಮೂಲಭೂತ ಸೌಕರ್ಯಗಳಿಗೆಂದು 1609.80 ಲಕ್ಷ ರೂ. ವಿನಿಯೋಗದ ಆಶಯ ವ್ಯಕ್ತಪಡಿಸಲಾಗಿದೆ.ಆದರೆ, ಅಭಿವೃದ್ಧಿ ವಿಚಾರದಲ್ಲಿ ನಗರಾಡಳಿತ ಯೋಜನೆ ರೂಪಿಸುವಲ್ಲಿ ಸೋತು ಸುಣ್ಣವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ತನ್ನದೆಂದು ಹೇಳಿಕೊಂಡಿದೆ.

ಕೇಂದ್ರ ಸರ್ಕಾರದ 14ನೆ ಹಣಕಾಸು ಆಯೋಗದ ಯೋಜನೆ, ರಾಜ್ಯ ಹಣಕಾಸು ಆಯೋಗದ ಯೋಜನೆ ಅನುದಾನದಲ್ಲಿ ರಸ್ತೆ ಅಭಿವೃದ್ಧಿಯ ಬಗ್ಗೆ ಮಾತನಾಡಿರುವ ನಗರಸಭಾಡಳಿತ ಈ ಯೋಜನೆಗಳಿಗೆ ತನ್ನ ಸಂಪನ್ಮೂಲದಿಂದ ಬಿಡಿಗಾಸನ್ನೂ ಕೊಡುತ್ತಿಲ್ಲ.ರಾಜ್ಯ ಸರ್ಕಾರದ ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪ.ಜ ಮತ್ತು ಪ.ಪಂ. ಫಲಾನುಭವಿಗಳಿಗೆ, ಕಡು ಬಡವರಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆ ನಿರ್ಮಿಸುವ ವಿಚಾರವನ್ನು ಪ್ರಸ್ತಾಪಿಸುವುದರ ಮೂಲಕ ಇದು ತನ್ನದೆ ಯೋಜನೆ ಎಂದು ನಗರಸಭಾಡಳಿತ ಬಿಂಬಿಸಿಕೊಂಡಿದೆ.ಹೀಗೆ ಹಲವಾರು ಲೋಪಗಳ ನಡುವೆಯೂ ಬಜೆಟ್ ಮಂಡನೆಯಾಗಿದ್ದೇ ಭಾಗ್ಯ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin