ತೆಲಂಗಾಣ ಖಾಸಗಿ ಬಸ್ ಅಪಘಾತ : 14 ಕ್ಕೇರಿದ ಸಾವಿನ ಸಂಖ್ಯೆ

Bus-1
ಹೈದರಾಬಾದ್,ಆ.22- ಬಸ್ಸೊಂದು ಕಾಲುವೆಗೆ ಬಿದ್ದ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ೧೪ ಕ್ಕೇರಿದೆ. ಈ ಘಟನೆಯಲ್ಲಿ ಇತರ 12 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.   ಖಾಸಗಿ ಬಸ್ಸೊಂದು ಹೈದರಾಬಾದ್ನಿಂದ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ನಾಯಕನ್ಗುಂಡೆಂನ ನಾಗಾರ್ಜುನ ಸಾಗರ್ ಪ್ರಾಜೆಕ್ಟ್ ಕಾಲುವೆಗೆ ಬಸ್ ಉರುಳಿ ಬಿದ್ದು 14 ಜನ ಮೃತಪಟ್ಟು ಇತರ 18 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
31 ಪ್ರಯಾಣಿಕರಿದ್ದ ಬಸ್ ನಿನ್ನೆ ರಾತ್ರಿ 11 ಗಂಟೆಗೆ ಹೈದರಾಬಾದ್ನ ಮಿಯಾಪುರದಿಂದ ಕಾಕಿನಾಡಗೆ ಪ್ರಯಾಣ ಬೆಳೆಸಿತ್ತು.

Bus-3

ಇಂದು ನಸುಕಿನಲ್ಲಿ ಕಮ್ಮಂ ಜಿಲ್ಲೆಯ ನಾಯಕನ್ ಗುಡೆಂನಲ್ಲಿ ನಾಗಾರ್ಜುನ ಸಾಗರ್ ಪ್ರಾಜೆಕ್ಟ್ ಕಾಲುವೆ ಮೇಲೆ ವೇಗವಾಗಿ ಹೋಗುತ್ತಿದ್ದಾಗ ಸೇತುವೆಗೆ ಬಸ್ ತಗಲುವುದನ್ನೂ ತಪ್ಪಿಸಲು ಚಾಲಕ ಹಠಾತ್ ಬ್ರೇಕ್ ಹಾಕಿದಾಗ ವಾಹನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿತು. ಈ ದುರಂತದ ಬ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸೂಕ್ತ ಚಿಕಿತ್ಸೆ ನೀಡುವಂತೆ ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 

Bus-2

Sri Raghav

Admin