ಖೈದಿಗಳಿಗೆ ಗಾಂಜಾ ಸರಬರಾಜು ಮಾಡಲೆತ್ನಿಸುತ್ತಿದ್ದರು ಈ ಖದೀಮರು

ganja

ಬೆಂಗಳೂರು, ಫೆ.8- ಕಾರಾಗೃಹದಲ್ಲಿರುವ ಆರೋಪಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಜೈಲಿನ ಬಳಿ ಹೊಂಚು ಹಾಕುತ್ತಿದ್ದ ಏಳು ಯುವಕರ ಪೈಕಿ ಮೂವರನ್ನು ಸಿಸಿಬಿ ಪೊಲೀಸರು ಬಂಸಿದ್ದಾರೆ.  ಕಾಮಾಕ್ಷಿಪಾಳ್ಯದ ದಿಲೀಪ್ (24), ಚೋಳೂರುಪಾಳ್ಯದ ಸತೀಶ್ (22) ಮತ್ತು ಮಣಿಕಂಠ (20) ಬಂತ ಆರೋಪಿಗಳಾಗಿದ್ದು, ಇನ್ನುಳಿದ ನಾಲ್ಕು ಮಂದಿ ಯುವಕರು ಅಪ್ರಾಪ್ತ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.  ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಗಳಾಗಿರುವ ಆರೋಪಿಗಳಿಗೆ ಮಾದಕ ವಸ್ತುಗಳನ್ನು ವ್ಯವಸ್ಥಿತವಾಗಿ ಸರಬರಾಜು ಮಾಡಲು ಕಾರಾಗೃಹದ ಬಳಿ ಹೊಂಚು ಹಾಕುತ್ತಿದ್ದಾಗ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಇವರನ್ನು ಬಂಸಿದ್ದಾರೆ.  ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin