ಖೋಟಾ ನೋಟು ಕೊಟ್ಟಿದ್ದಲ್ಲದೆ, ಗ್ರಾಹಕನ ಮೇಲೆ ಹಲ್ಲೆಗೆ ಯತ್ನಿಸಿದ ಅಂಗಡಿಯವರು

Spread the love

ತುಮಕೂರು, ಜೂ.11-ಖೋಟಾ ನೋಟುಗಳನ್ನು ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅಂಗಡಿ ಒಂದರ ಮಾಲೀಕನ ಕಡೆಯವರು ಗ್ರಾಹಕ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಗ್ರಾಹಕ ನಾಗೇಶ್ ಎಂಬಾತ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯ ನ್ಯೂ ಪ್ರಾವಿಷನ್ ಸ್ಟೋರ್‍ನಲ್ಲಿ ಕೆಲ ಸಾಮಾಗ್ರಿ ಖರೀದಿಸಿದಾಗ ಮಾಲೀಕ ದಾದಾ ಪೀರ್ ಆತನಿಗೆ ನೀಡಿದ್ದ ಹಣದಲ್ಲಿ ನೂರು ರೂ . ಖೋಟಾನೋಟು ಪತ್ತೆಯಾಗಿತ್ತು. ಈ ಬಗ್ಗೆ ಗಿರಾಕಿ ಅಂಗಡಿಯವನಿಗೆ ಪ್ರಶ್ನಿಸಿದಾಗ ಮಾಲೀಕ ದಾದಾ ಪೀರ ಮತ್ತು ಅವನ ಕಡೆಯವರು ನಾಗೇಶ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಈ ವೇಳೆ ಸ್ಥಳೀಯರು ಆಕ್ರೋಶಗೊಂಡ ಸಾರ್ವಜನಿಕರು ಈ ಅಂಗಡಿಗೆ ನುಗ್ಗಿ ದಾಂಧಲೆಗೆ ಮುಂದಾದಾಗ ಅಂಗಡಿಯಲ್ಲಿ 100 ರೂ ಮುಖ ಬೆಲೆಯ 2000 ಖೋಟಾ ನೋಟು ಪತ್ತೆಯಾಗಿದೆ.  ಇದರಿಂದ ಮತ್ತಷ್ಟು ಕೋಪಗೊಂಡ ಸ್ಥಳೀಯರು ಪೊಲೀಸರು ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.

Facebook Comments

Sri Raghav

Admin